ಚರ್ಮದ ಆರೋಗ್ಯಕ್ಕಾಗಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ. ಬೆರಳುಗಳ ಸಂದು, ತೊಡೆ ಸಂದಿ ಹಾಗೂ ಕಂಕುಳಿನ ಭಾಗದಲ್ಲಿ ಫಂಗಲ್ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ, ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹಾಗಾಗಿ ಇನ್ಫೆಕ್ಷನ್ ಹೊಡೆದೋಡಿಸಲು ಏನು ಮಾಡಬೇಕು ನೋಡಿ..
ಯೋಗರ್ಟ್ ಅಥವಾ ಮೊಸರು ಪದಾರ್ಥ ಸೇವಿಸಿ, ಇದರ ಒಳ್ಳೆಯ ಬ್ಯಾಕ್ಟೀರಿಯಾ ಕೆಟ್ಟ ಫಂಗಸ್ನ್ನು ಓಡಿಸುತ್ತದೆ.
ಸೋಪು ಹಾಗೂ ನೀರು ಹಾಕಿ ಆಗಾಗ ತೊಳೆಯಿರಿ
ಆಪಲ್ ಸೈಡರ್ ವಿನೇಗರ್ನ್ನು ಹತ್ತಿಗೆ ಹಾಕಿಕೊಂಡು ಇನ್ಫೆಕ್ಷನ್ ಆದ ಜಾಗ ಒರೆಸಿ
ಅರಿಶಿಣದ ಪ್ಯಾಕ್ ಹಾಕಿ
ಕೊಬ್ಬರಿ ಎಣ್ಣೆ ದಿನವೂ ಸವರಿ
ಲೋಳೆಸರದ ಪೇಸ್ಟ್ ಮಾಡಿಕೊಂಡು, ಲೇಪನ ಮಾಡಿಕೊಳ್ಳಿ
ಒಬ್ಬರ ಬಟ್ಟೆ ಇನ್ನೊಬ್ಬರು ಹಾಕಬೇಡಿ
ಒಳಉಡುಪುಗಳು ಶುಚಿಯಾಗಿರಲಿ, ಚೆನ್ನಾಗಿ ಒಣಗಿರಲಿ. ಐರನ್ ಮಾಡಿ ಹಾಕಿಕೊಳ್ಳಿ.
ಒಳಉಡುಪುಗಳನ್ನು ಎಲ್ಲ ಬಟ್ಟೆ ಜೊತೆ ವಾಶಿಂಗ್ ಮಶೀನ್ಗೆ ಹಾಕಬೇಡಿ, ಬಿಸಿನೀರಿನಲ್ಲಿ ತೊಳೆದು ಒಣಗಿಸಿ ನಂತರ ತೊಳೆಯಲು ಹಾಕಿ.
ಇನ್ಫೆಕ್ಷನ್ ಹೆಚ್ಚಿದೆ ಎನಿಸಿದರೆ ವೈದ್ಯರನ್ನು ಭೇಟಿ ಮಾಡಿ, ಕೊಡುವ ಮಾತ್ರೆಗಳನ್ನು ಮರೆಯದೇ ಸೇವಿಸಿ