ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರವಷ್ಟೇ ಆರಂಭವಾಗಿದ್ದ ಗಾಂಧಿನಗರ ಮತ್ತು ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ ಹೈಸ್ಪೀಡ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ರೈಲಿನ ಮುಂಭಾಗ ಹಾನಿಯಾಗಿದೆ. ಇಂದು ಬೆಳಗ್ಗೆ ಮುಂಬೈನಿಂದ ಗಾಂಧಿನಗರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಮುಂಬೈನಿಂದ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ ಹೈಸ್ಪೀಡ್ ರೈಲು ಅಹಮದಾಬಾದ್ನ ಬಟ್ವಾ ಮತ್ತು ಮಣಿನಗರದ ನಡುವೆ ಎಮ್ಮೆಗಳ ಹಿಂಡಿಗೆ ಗುದ್ದಿದ್ದು, ಇದರ ಪರಿಣಾಮ ರೈಲಿನ ಮುಂಭಾಗ ಜಖಂಗೊಂಡಿದೆ.
ಆರಂಭವಾದ ಆರೇ ದಿನಗಳಲ್ಲಿ ಎಮ್ಮೆಗಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ಹೈಸ್ಪೀಡ್ ರೈಲು ಜಖಂಈ ಘಟನೆಯ ನಂತರ ಕಾರ್ಮಿಕರು ಇಂಜಿನ್ನ ಹಾನಿಯಾದ ಮುಂಭಾಗವನ್ನು ತೆಗೆದುಹಾಕುತ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ. ಹಳಿಯಿಂದ ರೈಲಿನ ಹಾನಿಯಾದ ಭಾಗಗಳನ್ನು ತೆರವುಗೊಳಿಸಿದ ನಂತರ ರೈಲು ತನ್ನ ಪ್ರಯಾಣ ಮುಂದುವರೆಸಿದೆ.