Friday, November 21, 2025

BIG BOSS | ಕಿಚ್ಚ ಸುದೀಪ್, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್;

ಬಿಗ್​​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅವಮಾನಕಾರಿ ಆಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಆರೋಪದ ಮೇಲೆ ನಟ ಸುದೀಪ್ ಹಾಗೂ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.

ರಕ್ಷಿತಾ ಶೆಟ್ಟಿ ಮೇಲೆ ಸುದೀಪ್ ಗರಂ ಆಗಿದ್ದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.

ಇತ್ತೀಚೆಗೆ ಅವರು ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡರು. ಆಗ ‘ಪಿತ್ತ ನೆತ್ತಿಗೆ ಏರುತ್ತದೆ’ ಎಂದು ಹೇಳಿದ್ದರು. ಆ ಮಾತಿಗೆ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಅವರು ದೂರು ನೀಡಿದ್ದಾರೆ.

‘ಸ್ಪರ್ಧಿ ರಕ್ಷಿತಾಗೆ ಸುದೀಪ್ ನಿಂದಿಸಿದ್ದಾರೆ. ಸುದೀಪ್ ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ನೀಡಿದ್ದೇನೆ. ಸುದೀಪ್ ಅವರು ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ? ಜೊತೆಗೆ ಅಶ್ವಿನಿ ಗೌಡ ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ’ ಎಂದು ಸಂಧ್ಯಾ ಹೇಳಿದ್ದಾರೆ.

error: Content is protected !!