September 21, 2026
Monday, September 21, 2026
spot_img

ಬೆಂಗಳೂರು ಏರ್‌ಪೋರ್ಟ್‌ಗೆ ನಗ್ನ ಜೋಡಿಯ ಫೋಟೊ, ಹೂವಿನ ಹಾರ ಪಾರ್ಸಲ್‌ ಬಂದಿದೆಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಚಿತ್ರ ಘಟನೆಗಳಿಗೆ ಬೆಂಗಳೂರು ಏರ್‌ಪೋರ್ಟ್‌ ಹೊಸತೇನಲ್ಲ. ನಗ್ನ ಜೋಡಿಯ ಫೋಟೊ, ಹೂವಿನ ಹಾರ ಸೇರಿ ಇನ್ನಿತರ ವಸ್ತುಗಳಿರುವ ಪಾರ್ಸಲ್‌ ಒಂದು ಬೆಂಗಳೂರು ಏರ್‌ಪೋರ್ಟ್‌ ತಲುಪಿದೆ!

ಹೌದು, ಬೆಂಗಳೂರು ಏರ್‌ಪೋರ್ಟ್‌ಗೆ ವಾಮಾಚಾರ ಮಾಡೋಕೆ ಟ್ರೈ ಮಾಡ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಸ್ಟ್ ಆಫೀಸ್‌ಗೆ ಪಾರ್ಸೆಲ್‌ವೊಂದು ಬಂದಿದ್ದು, ತೆಗೆದು ನೋಡುತ್ತಿದ್ದಂತೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಪಾರ್ಸೆಲ್‌ನಲ್ಲಿ ಮಹಿಳೆ ಹಾಗೂ ಪುರುಷನ ಬೆತ್ತಲೆ ಫೋಟೋ, ಅದರ ಸುತ್ತಲು ಕೊಳೆತ ಟೊಮೆಟೋ, ಹೂವಿನ ಹಾರ, ಅದರ ಮೇಲೆ ಕಬ್ಬಿಣದ ಪೀಸ್ ಹಾಗೂ ಟೂತ್ ಪೇಸ್ಟ್ ಇಟ್ಟಿದ್ದಾರೆ.

ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಪಾರ್ಸಲ್‌ ಬಂದಾಗಿನಿಂದ ಅಲ್ಲಿನ ಸಿಬ್ಬಂದಿಯ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಕಾಣಿಸಿದ್ದು, ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಪಾರ್ಸಲ್‌ ಕಳುಹಿಸಿದವರಿಗಾಗಿ ಹುಡುಕಾಟ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !