Tuesday, November 25, 2025

ನಾನಂತೂ ಬರೋಬ್ಬರಿ 100 ವರ್ಷ ಬದುಕುತ್ತೇನೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನಗೀಗ 78 ವರ್ಷ ತುಂಬಿ, 79ನೇ ವರ್ಷ ನಡೆದಿದೆ. ನಾನಂತೂ ಕನಿಷ್ಠ ನೂರು ವರ್ಷ ಬಾಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಈಗ 79 ವರ್ಷ 4 ತಿಂಗಳು ಆಗಿದೆ. ನಾನಂತೂ 100 ವರ್ಷ ಬದುಕುತ್ತೇನೆ. ಗಾಂಧೀಜಿಗೆ ಒಬ್ರು ಪತ್ರ ಬರೆದು, 100 ವರ್ಷ ಬದುಕಿ ಅಂತ ಹೇಳಿದ್ದರು. ಆಗ ನಾನು 125 ವರ್ಷ ಬದುಕಬೇಕು ಅಂತಿದ್ದೇನೆ ಅಂತ ಗಾಂಧಿ ಉತ್ತರ ಕೊಟ್ಟಿದ್ದರು ಅಂತ ಸ್ಮರಿಸಿಕೊಂಡ್ರು. ನಾನೂ ಕೂಡ 100 ವರ್ಷ ಬದುಕುತ್ತೇನೆ ಎಂದು ನಗುತ್ತಾ ಸಿದ್ದರಾಮಯ್ಯ ಹೇಳಿದ್ರು.

ಜನರ ಆಶೀರ್ವಾದ ಇದ್ದಾಗಲಷ್ಟೇ ನಾವು ಅಧಿಕಾರದಲ್ಲಿರಲು ಸಾಧ್ಯ. ಒಟ್ಟು 16 ಚುನಾವಣೆ ಎದುರಿಸಿದ್ದು, ನಾಲ್ಕು ಬಾರಿ ಸೋತಿದ್ದೇನೆ’ ಎಂದರು. ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶುಕ್ರವಾರ ವಕೀಲ ರವಿವರ್ಮಕುಮಾರ್ ಅವರಿಗೆ, ‘ಡಿ.ದೇವರಾಜ ಅರಸು–ಎಲ್‌.ಜಿ. ಹಾವನೂರು’ ಪ್ರಶಸ್ತಿ ಪ್ರದಾನ ಮಾಡಿದರು.

ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ, ಕೆಲ ಜ್ಯೋತಿಷಿಗಳು ಸಿ.ಎಂ ಸ್ಥಾನವೇ ಹೋಗುತ್ತದೆ ಎಂದಿದ್ದರು. ಆಗ ಐದು ವರ್ಷ ಅಧಿಕಾರ ಪೂರೈಸಿದೆ. ಈಗ ಎರಡನೇ ಅವಧಿಯಲ್ಲಿ ಎರಡೂವರೆ ವರ್ಷ ಕಳೆದಿದೆ. ರವಿವರ್ಮಕುಮಾರ್–ಶಾರದಾ ಅಮಾವಾಸ್ಯೆ ದಿನವೇ ಮದುವೆ ಆದವರು. ನಮ್ಮಲ್ಲಿನ ಮೂಢನಂಬಿಕೆಗಳನ್ನು ಬಿಡಬೇಕು ಎಂದರು. ನೀವೇ ಐದು ವರ್ಷ ಸಿ.ಎಂ ಆಗಿರಬೇಕು ಎಂದು ಅಭಿಮಾನಿಗಳು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿ, ‘ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

error: Content is protected !!