ಮಲಗಿದ್ದವರ ಮೇಲೆ ಕುಸಿದು ಬಿದ್ದ ಗೋಡೆ: ವೃದ್ದೆ ಸಾವು, ಇಬ್ಬರಿಗೆ ಗಾಯ

ಹೊಸದಿಗಂತ ವರದಿ, ಗದಗ :

ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಗೋಡೆ ಕುಸಿದ ಪರಿಣಾಮ ಓರ್ವ ವೃದ್ದೆಯು ಮೃತಪಟ್ಟು ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಬೆಟಗೇರಿಯ ಕನ್ಯಾಳ ಅಗಸಿಯ ಕುಲಕರ್ಣಿ ಗಲ್ಲಿಯಲ್ಲಿ ಗುರುವಾರ ಸಂಭವಿಸಿದೆ.

ರೋಣ ತಾಲ್ಲೂಕಿನ ಅಸೂಟಿ ಗ್ರಾಮದಿಂದ ನಾಲ್ಕು ದಿನಗಳ ಹಿಂದೆ ಬಾಡಿಗೆಗೆ ಬಂದಿದ್ದ ಈ ಕುಟುಂಬಕ್ಕೆ ಗುರುವಾರು ಗುರುಬಲ ನೀಡಲಿಲ್ಲ, ಬೆಳಗಿನ ಜಾವ ನಿದ್ರೆಯ ಮಂಪರನಲ್ಲಿದ್ದವರ ಮೇಲೆ ಗೋಡೆ ಕುಸಿದುಬಿದ್ದಿದ್ದು ಇದರ ಅವಶೇಷಗಳಡಿ ಸಿಲುಕಿದ್ದ ಸುಶೀಲವ್ವ ಕಲ್ಮಠ (೬೦) ಅವರು ಸ್ಥಳದಲ್ಲಿ ಮೃತಪಟ್ಟರೆ, ಅಡವೆಯ್ಯ ಕಲ್ಮಠ, ಬಸಮ್ಮ ನಡಕಟ್ಟಿ ಅವರಿಗೆ ಗಂಭೀರ ಗಾಯಗಳಾಗಿವೆ.ಅಗ್ನಿಶಾಮಕ ದಳದ ಸಿಬ್ಬಂದಿ ಮೂವರನ್ನು ಅವಶೇಷಗಳಿಂದ ಹೊರತೆಗೆದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಾಗಿ ದಾಖಲು ಮಾಡಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!