ಶಾಕಿಂಗ್ ವಿಡಿಯೋ: ಅಬ್ಬಬ್ಬಾ ಮಹಿಳೆಯ ಕಣ್ಣಲ್ಲಿ ಬರೋಬ್ಬರಿ 23 ಕಾಂಟ್ಯಾಕ್ಟ್ ಲೆನ್ಸ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೃಷ್ಟಿ ದುರ್ಬಲಗೊಂಡಾಗ ಕನ್ನಡಕವನ್ನು ಬಳಸಲಾಗುತ್ತದೆ. ಆದರೆ ಕನ್ನಡಕದ ಬದಲಿಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದು ಇತ್ತೀಚೆಗೆ ಅಭಿವೃದ್ಧಿಯಾದ ತಂತ್ರಜ್ಞಾನ. ಕನ್ನಡಕದಿಂದ ಸೌಂದರ್ಯ ಹಾಳಾಗುತ್ತದೆ ಎಂದುಕೊಂಡವರು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದಾರೆ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಕಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು, ಕಣ್ಣುಗಳನ್ನು ಉಜ್ಜದಂತೆ, ಮಲಗುವಾಗ ತೆಗೆದಿಟ್ಟು ಮಲಗಬೇಕು. ಸಾಮಾನ್ಯವಾಗಿ ಕಾಂಟ್ಯಾಕ್ಟ್ ಲೆನ್ಸ್ ಅಂದರೆ ಒಂದೇ ಇರುತ್ತದೆ. ಆದರೆ, ಈ ಮಹಿಳೆಯ ಕಣ್ಣಿನಲ್ಲಿ 23 ಕಾಂಟ್ಯಾಕ್ಟ್ ಲೆನ್ಸ್ ಗಳಿರುವುದು ಅಚ್ಚರಿ ಮೂಡಿಸಿದೆ. ಮಲಗುವ ಮೊದಲು ಅವುಗಳನ್ನು ತೆಗೆದುಹಾಕುವುದನ್ನು ಮರೆತು ಪ್ರತಿದಿನ ಹೊಸದಾಗಿ ಲೆನ್ಸ್‌ ಹಾಕಿಕೊಳ್ಳುತ್ತಾಳೆ.

ಸತತ 23 ದಿನಗಳ ಕಾಲ ಹೀಗೆ ಮಾಡಿದ್ದಾರೆ. ಕೊನೆಗೆ ಅವಳ ಕಣ್ಣಿನಲ್ಲಿ ನೋವು ಶುರುವಾಗಿ ಆಸ್ಪತ್ರೆಗೆ ಹೋದಾಗ ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಮಹಿಳೆಯ ಕಣ್ಣಿನಲ್ಲಿ ಏನೋ ಇರುವುದು ಕಂಡು ಬಂದಿದೆ. ಶಸ್ತ್ರಚಿಕಿತ್ಸಾ ಉಪಕರಣದ ಸಹಾಯದಿಂದ 23 ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹೊರತೆಗೆದಿದ್ದಾರೆ. ಇದನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಕ್ಯಾಲಿಫೋರ್ನಿಯಾ ಐ ಅಸೋಸಿಯೇಟ್ಸ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!