ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಕ್ಕನ್ನು ನಾಲ್ಕು ಗೋಡೆಗಳ ಮಧ್ಯೆ ಹೊಡೆದರೆ ಅದು ಕೂಡಾ ಹುಲಿಯಂತೆ ಘರ್ಜಿಸುತ್ತದೆ. ಯಾವುದೇ ಪ್ರಾಣಿಗಳಾದರೂ ಸರಿಯೇ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೋರಾಡುತ್ತವೆ. ಸಾಧು ಪ್ರಾಣಿಗಳ್ವಾ ಏನು ಮಾಡುತ್ತವೆ? ಅಂದುಕೊಂಡರೆ ಅದು ಅವರ ಭ್ರಮೆ ಅವು ತಿರುಗಿಬಿದ್ದರೆ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ. ಹಸುವಿನ ವಿಷಯದಲ್ಲೂ ಅದೇ ಆಗಿದೆ.
ವ್ಯಕ್ತಿಯೊಬ್ಬ ಹಸುವನ್ನು ಕದಲದಂತೆ ಹಗ್ಗದಿಂದ ಕಟ್ಟಿ, ಮನಬಂದಂತೆ ಕಾಲಿನಿಂದ ಒದ್ದಿದ್ದಾನೆ. ಹಸು ಅವನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ತೊಂದರೆ ಕೊಟ್ಟಿದ್ದಾನೆ. ಹಸು ಪಿತ್ತ ನೆತ್ತಗೇರಿ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ತನ್ನ ಕೊಂಬುಗಳಿಂದ ಕೆಳಕ್ಕೆ ಕೊಡವಿ, ಪಾದಗಳಿಂದ ತುಳಿದು ವ್ಯಕ್ತಿಯನ್ನು ಹಣ್ಣುಗಾಯಿ ನೀರುಗಾಯಂತೆ ಮಾಡಿದೆ. ಅಲ್ಲಿದ್ದ ಹಲವರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
Kalesh With Animal (Cow-Gang Assemble 💪) pic.twitter.com/JaOHU7WjRo
— r/Ghar Ke Kalesh (@gharkekalesh) October 13, 2022