ಸಮಸ್ಯೆಯಿದ್ದಲ್ಲಿ ಬಾರ್‌ಗೆ ಬನ್ನಿ…ಡಾಕ್ಟರ್ ಕೊಟ್ಟ ಔಷಧಿ ಚೀಟಿ ಕಂಡು ಶಾಕ್ ಆದ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ತ್ರಿಶೂರ್ ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಕಾಲು ನೋವು ಎಂದು ಔಷಧಿಗಾಗಿ ವೈದ್ಯರ ಬಳಿ ಬಂದ ದಂಪತಿಗಳಿಗೆ ವೈದ್ಯ ನೀಡಿದ ಚೀಟಿ ಇದೀಗ ಭಾರೀ ವೈರಲ್‌ ಆಗಿದೆ.

ಹಾಗಿದ್ರೆ ಈ ಚೀಟಿಯಲ್ಲಿ ಏನಿತ್ತು ಗೊತ್ತಾ?… ಇಲ್ಲಿ ಓದಿ,

ಕೇರಳದ ತ್ರಿಶೂರ್ ನ ಮಮ್ಮಿಯಾರ್‌ ನಿವಾಸಿ ಪ್ರಿಯಾ (44) ಮತ್ತು ಅಕೆಯ ಪತಿ ಅನಿಲ್‌ಕುಮಾರ್‌ ಕಳೆದ ಗುರುವಾರ ಅಲ್ಲಿನ ದಯಾ ಆಸ್ಪತ್ರೆಯಲ್ಲಿ ನಾಳೀಯ ಶಸ್ತ್ರಚಿಕಿತ್ಸೆ ವಿಭಾಗದ ಡಾ. ರಾಯ್‌ ವಾರ್ಘೀಸ್‌ ಎಂಬುವರರನ್ನು ಭೇಟಿ ಮಾಡಿದ್ದರು.
ಪ್ರಿಯಾ ಅವರು ವದಕ್ಕೇಕದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದು,. ಕಳೆದ ಎರಡು ವರ್ಷದಿಂಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ರಾಯ್​ ವಾರ್ಘೀಸ್​ ಎಂಬುವರನ್ನು ಭೇಟಿ ಮಾಡಿದರು.

ಈ ವೇಳೆ ಡಾ. ​ವಾರ್ಘೀಸ್​ ದಂಪತಿಗೆ ಎಕ್ಸ್​ರೇ ವರದಿ ತರುವಂತೆ ಹೇಳಿದರು. ಎಕ್ಸ್​ರೇ ವರದಿ ಪಡೆದು ಮರಳಿ ಡಾಕ್ಟರ್​ ಬಳಿ ಬಂದಾಗ ಎಕ್ಷ್​ರೇ ನೋಡಿ ಡಾ. ​ವಾರ್ಘೀಸ್​ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸುವಂತೆ ದಂಪತಿಗೆ ತಿಳಿಸಿದ್ದಾರೆ.

ಈ ವೇಳೆ ಪ್ರಿಯಾ ಪತಿ ಅನಿಲ್ ಕುಮಾರ್, ಪತ್ನಿಗೆ ನಡೆಯಲು ಆಗುತ್ತಿಲ್ಲ. ತಾತ್ಕಲಿಕ ಪರಿಹಾರಕ್ಕಾಗಿ ಏನಾದರೂ ಔಷಧ ಬರೆದುಕೊಡಿ ಎಂದು ಡಾ. ವಾರ್ಘೀಸ್​ರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಬರೆದು ಕೊಟ್ಟ ಔಷಧ ಚೀಟಿ ನೋಡಿ ದಂಪತಿ ಶಾಕ್ ಆಗಿದ್ದಾರೆ .

ಡಾ. ವಾರ್ಘೀಸ್​ ಬರೆದುಕೊಟ್ಟ ಔಷಧ ಚೀಟಿಯಯಲ್ಲಿ ‘ಯಾವುದೇ ಬೆಡ್​ ರೆಸ್ಟ್​ ಇಲ್ಲ. (ಪತಿ) ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಭೇಟಿ ನೀಡಿ’ ಎಂದು ಬರೆಯಲಾಗಿದೆ.

ಈ ಸಂಬಂಧ ಅನಿಲ್ ಕುಮಾರ್ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದು, ದಯಾ ಆಸ್ಪತ್ರೆ ಡಾ. ವರ್ಘೀಸ್​ರನ್ನು ಕರ್ತವ್ಯದಿಂದಲೇ ವಜಾಗೊಳಿಸುವ ಮೂಲಕ ಡಾಕ್ಟರ್​ಗೆ ಶಾಕ್​ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!