ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಡಿತರ ಚೀಟಿದಾರರಿಗೊಂದು ದೀಪಾವಳಿ ಉಡುಗೊರೆ ಸಿಗಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದೆ. ಇದಾದ ಬಳಿಕ ರಾಜ್ಯ ಸರ್ಕಾರಗಳು ಕೂಡ ಕಾರ್ಡ್ದಾರರಿಗೆ ಅನೇಕ ಕೊಡುಗೆ ಘೋಷಣೆ ಮಾಡುತ್ತಿವೆ.
ಮಹಾರಾಷ್ಟ್ರ ಸರ್ಕಾರ ಪಡಿತರ ಚೀಟಿದಾರರಿಗೆ ವಿಶೇಷ ಘೋಷಣೆ ಮಾಡಿದೆ. ಇದರ ಅಡಿಯಲ್ಲಿ ಸರ್ಕಾರದಿಂದ ಕೇವಲ 100 ರೂ.ಗೆ ದಿನಸಿ ನೀಡುತ್ತಿದೆ.
ಹೆಚ್ಚುತ್ತಿರುವ ಹಣದುಬ್ಬರ ಗಮನದಲ್ಲಿಟ್ಟುಕೊಂಡು ಸರ್ಕಾರ ಸಕ್ಕರೆ ಬೆಲೆಯನ್ನು ಕಡಿಮೆ ಮಾಡಲು ಘೋಷಿಸಿದೆ. ಇದಾದ ನಂತರ ಸಕ್ಕರೆಗೆ ಕೆಜಿಗೆ ಕೇವಲ 20 ರೂ. ಸರ್ಕಾರದ ಈ ಘೋಷಣೆಯ ಲಾಭ ಅಂತ್ಯೋದಯ ಕಾರ್ಡ್ ದಾರರಿಗೆ ಸಿಗಲಿದೆ.
ಕೇವಲ 100 ರೂ.ಗೆ ದಿನಸಿಯಲ್ಲಿ ಒಂದು ಕೆ.ಜಿ ರವೆ, ಖಾದ್ಯ ಎಣ್ಣೆ, ತೊಗರಿ, ಉದ್ದಿನಬೇಳೆ ಮತ್ತು ಶೇಂಗಾ ಸಿಗುತ್ತದೆ.
ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿರುವುದರಿಂದ ದೇಶಾದ್ಯಂತ ಕಾರ್ಡುದಾರರಲ್ಲಿ ಸಂತಸದ ಅಲೆ ಎದ್ದಿದ್ದರೆ, ಮಹಾರಾಷ್ಟ್ರ ಸರ್ಕಾರದ ಈ ಘೋಷಣೆ ಪಡಿತರ ಚೀಟಿದಾರರ ದೀಪಾವಳಿ ಸಂಭ್ರಮ ಹೆಚ್ಚಿಸಿದೆ.