ಹೊಸದಿಗಂತ ವರದಿ, ಶಿರಸಿ:
ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಪುನರ್ ತನಿಖೆಗೆ ರಾಜ್ಯ ಸರ್ಕಾರ ಸೂಚಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ಧಿಗಾರರೊಂದಿಗೆ ಮಾತನಾಡಿ, ಪರೇಶ ಮೇಸ್ತ ಸಾವು ಹೇಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆಗಿನ ರಾಜ್ಯ ಸರ್ಕಾರ ಹೇಗೆ ನಡೆದಿತ್ತು ಎಂಬುದೂ ತಿಳಿದಿದೆ. ಈಗ ಸಿಬಿಐ ಈ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದೆ. ಆದರೆ ಪರೇಶ ಮೇಸ್ತ ತಂದೆ, ಕುಟುಂಬಸ್ಥರು, ಜಿಲ್ಲೆಯ ಜನತೆ ಯಾವ ಅಭಿಪ್ರಾಯ ಆಗ ಹೊಂದಿದ್ದರೋ ಈಗಲೂ ಅದೇ ಅಭಿಪ್ರಾಯ ಹೊಂದಿದ್ದಾರೆ. ಸಾಕ್ಷ್ಯ ನಾಶ ಮಾಡಿ ಸಿಬಿಐಗೆ ವಹಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಘಟನೆಯ ಹಿನ್ನೆಲೆ ಕೂಡ ಮುಖ್ಯ. ಅದನ್ನೂ ಕೂಲಂಕುಷವಾಗಿ ಪರಿಶೀಲಿಸಬೇಕು. ಈ ಕುರಿತು ಈಗಾಗಲೇ ಗೃಹ ಸಚಿಚರು, ಮುಖ್ಯಮಂತ್ರಿ ಜತೆ ಮಾತನಾಡಿದ್ದು, ಪುನರ್ ತನಿಖೆ ಮಾಡಬೇಕು ಎಂದು ಹೇಳಿದ್ದಾಗಿ ತಿಳಿಸಿದರು. ಮುಚ್ಚಿದ ಪ್ರಕರಣ ಪುನರ್ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆ ಸಾಕಷ್ಟಿದೆ ಎಂದರು.