ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಹೇಳಿಕೆಯನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿರಸ್ಕರಿಸಿದ್ದಾರೆ. ಬಿಡೆನ್ ಅವರ ಸಲಹಾ ತಂಡ ಉತ್ತಮವಾಗಿಲ್ಲ ಮತ್ತು ಅವರು ಬಿಡೆನ್ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ದಶಕಗಳಿಂದಲೂ ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಪಾಕಿಸ್ತಾನವು ಅತಿ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮರೆಮಾಡಲು ನಮ್ಮ ಬಳಿ ಯಾವುದೇ ದೊಡ್ಡ ರಹಸ್ಯಗಳಿಲ್ಲ. ಅವುಗಳ ನಿರ್ವಹಣೆ ಮತ್ತು ರಕ್ಷಣೆಗಾಗಿ ನಾವು ಭದ್ರತೆಯನ್ನು ಏರ್ಪಡಿಸಿರುವುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿದರು.
ಕೆಲವೊಮ್ಮೆ ಜಗತ್ತಿನಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಅವುಗಳಿಂದಾಗಿ ಇರುವ ಸಂಬಂಧಗಳನ್ನು ಪ್ರಶ್ನಿಸುವ ಮತ್ತು ಅವಮಾನಿಸುವ ಅಗತ್ಯವಿಲ್ಲ. ಪಾಕಿಸ್ತಾನವು ಹಲವು ವರ್ಷಗಳಿಂದ ರಾಜತಾಂತ್ರಿಕವಾಗಿ ಮತ್ತು ಇತರ ವಿಷಯಗಳಲ್ಲಿ ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಹಾಗಂತ ಅನಾವಶ್ಯಕ ಕಾಮೆಂಟ್ ಮಾಡಬೇಡಿ. ಪ್ರಾದೇಶಿಕ ಭದ್ರತೆ ಮತ್ತು ಶಾಂತಿ ಅತ್ಯಗತ್ಯ. ಅಮೆರಿಕ ಅವೆಲ್ಲವುಗಳನ್ನು ಗೌರವಿಸುತ್ತದೆ ಎಂದು ಭಾವಿಸಿದ್ದೇನೆ.
ಕ್ಯಾಲಿಫೋರ್ನಿಯಾದ ಇರ್ವಿನ್ನಲ್ಲಿ ಶುಕ್ರವಾರ ನಡೆದ ಡೆಮಾಕ್ರಟಿಕ್ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿ ಕಾರ್ಯಕ್ರಮದಲ್ಲಿ ಜೋ ಬಿಡೆನ್, “ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ, ಈ ದೇಶವು ಇತರ ದೇಶಗಳೊಂದಿಗೆ ಯಾವುದೇ ಸಮನ್ವಯವಿಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ” ಎಂದು ಹೇಳಿದ್ದರು. 1998 ರಿಂದ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳು ಆಚರಿಸಲಾಗುತ್ತಿದೆ, ಪಾಶ್ಚಿಮಾತ್ಯ ರಾಷ್ಟ್ರಗಳು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿವೆ. ಭಯೋತ್ಪಾದಕ ರಾಷ್ಟ್ರವಾಗಿರುವ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಅದು ಭಯೋತ್ಪಾದಕರ ಕೈಗೆ ಸಿಗಬಹುದು ಎಂದು ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ.