ವಿಶಾಖಪಟ್ಟಣ ಬಿಟ್ಟು ಹೋಗುವಂತೆ ಪವನ್‌ ಕಲ್ಯಾಣ್‌ಗೆ ಪೊಲೀಸರಿಂದ ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖಪಟ್ಟಣಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿ ವೇಳೆ ಉದ್ವಿಗ್ನತೆ ಮುಂದುವರೆದಿದೆ. ಸ್ಥಳೀಯ ಪೊಲೀಸರು ಪವನ್ ಕಲ್ಯಾಣ್ ಮತ್ತು ಜನಸೇನಾ ಮುಖಂಡರಿಗೆ ವಿಶಾಖಪಟ್ಟಣದಿಂದ ಹೋಗುವಂತೆ ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ ಸ್ವತಃ ಪವನ್ ಅವರೇ ಈ ನೋಟಿಸ್ ಸ್ವೀಕರಿಸಿದ್ದಾರೆ. ಶಾಂತಿ ಮತ್ತು ಭದ್ರತೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಪವನ್ ವಿಶಾಖ ತೊರೆಯಬೇಕು ಎಂದು ಪೊಲೀಸರು ನೋಟಿಸ್ ನಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ತಮ್ಮ ಕಾರ್ಯಕರ್ತರು ಮತ್ತು ಮುಖಂಡರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಪವನ್ ಪೊಲೀಸರನ್ನು ಒತ್ತಾಯಿಸಿದರು. ಬಂಧಿತರಾಗಿರುವ ತಮ್ಮ ಪಕ್ಷದ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದರು. ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಪವನ್ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಚೆಕ್‌ಗಳ ವಿತರಣೆಯನ್ನು ಸಹ ಪವನ್ ತಾವು ತಂಗಿದ್ದ ಹೋಟೆಲ್ ನಿಂದಲೇ ಕಾರ್ಯಕ್ರಮ ಮುಗಿಸಿದರು.

ನೋಟಿಸ್ ಸ್ವೀಕರಿಸಿ ಮಾತನಾಡಿದ ಪವನ್, ಜನರ ಪರ ಹೋರಾಟ ಮಾಡಿದರೆ ನೋಟಿಸ್‌ ಕೊಡುತ್ತಾರೆ. ನಾವು ವಿಶಾಖಪಟ್ಟಣಕ್ಕೆ ಬರುವ ಮುನ್ನವೇ ಜಗಳ ನಡೆದಿದೆ. ಆದರೆ, ನಾವು ಬಂದು ಪ್ರಚೋದನೆ ನೀಡಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ. ಎಷ್ಟೇ ಕೇಸ್ ಹಾಕಿದರೂ ಜೈಲಿಗೆ ಹೋಗಲು ಸಿದ್ಧ. ಇದು ಉತ್ತರಾಂಧ್ರದ ಲೂಟಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!