ನಟಿ ದಿವ್ಯಾ- ಅಮ್ಜಾದ್‌ ಕೇಸ್‌ ಗೆ ಬಿಗ್ ಟ್ವಿಸ್ಟ್:‌ ತೃತೀಯಲಿಂಗಿ ಜೊತೆಗೂ ವಿವಾಹ! ಸ್ಫೋಟಕ ಆಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಟಿ ದಿವ್ಯಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರಿಂದ ಬಂಧನಕ್ಕೊಳಗಾಗಿರುವ ತಮಿಳು ಕಿರುತೆರೆ ನಟ ಅಮ್ಜಾದ್‌ ಅಲಿಯಾಸ್‌ ಅರ್ನವ್, ಈ ಹಿಂದೆ ತೃತೀಯಲಿಂಗಿಯೊಬ್ಬಳನ್ನು ಮದುವೆಯಾಗಿ ಆಕೆಗೂ ವಂಚಿಸಿದ್ದ ಎನ್ನಲಾಗಿದೆ. ಸುದ್ದಿವಾಹಿನಿಯೊಂದು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಅಮ್ಜಾದ್ ‌ಈ ಹಿಂದೆ ತನ್ನನ್ನು ಮದುವೆಯಾಗಿದ್ದು, ದಿವ್ಯಾ ಆರೋಪಿಸಿರುವಂತಹ ಅಪರಾಧ ಕೃತ್ಯಗಳನ್ನೆಲ್ಲವನ್ನು ಎಸಗುವ ಸಾಮರ್ಥ್ಯವನ್ನು ಆತ ಹೊಂದಿದ್ದಾನೆ ಎಂದು ಮಲೇಷ್ಯಾದಲ್ಲಿ ವಾಸವಿರುವ ತೃತೀಯಲಿಂಗಿಯೊಬ್ಬರು ಆರೋಪಿಸಿದ್ದಾರೆ.
“ಚೆಲ್ಲಮ್ಮ” ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ಕಿರುತೆರೆ ನಟಿ ದಿವ್ಯಾ ಅವರು ತನ್ನ ಪತಿ ಅಮ್ಜಾದ್ ಮೇಲೆ ಹಲ್ಲೆ, ಕಿರುಕುಳ ಮತ್ತು ವಿವಾಹೇತರ‌ ಅಕ್ರಮ ಸಂಬಂಧದ ಆರೋಪ ಮಾಡಿ ಚೆನ್ನೈನ ಪೋರೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ 14 ರಂದು ಅಮ್ಜಾದ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಂಧಿಸಲಾಯಿತು. ಅರ್ನವ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ ಮತ್ತು ಕಿರುಕುಳಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ.
ಮತ್ತೊಂದೆಡೆ, ಅಮ್ಜಾದ್‌ ದಿವ್ಯಾ ತನ್ನ ಸ್ನೇಹಿತನ ಪ್ರಭಾವದಿಂದ ತನ್ನ ಮಗುವಿಗೆ ಗರ್ಭಪಾತ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕೇಸ್ ದಾಖಲಿಸಿದ್ದಾನೆ. ಈ ಮಧ್ಯೆ, ಮಲೇಷ್ಯಾದ ತೃತೀಯಲಿಂಗಿ ಮತ್ತು ಆಕೆಯ ಸ್ನೇಹಿತೆ ನಡುವಿನ ಆಡಿಯೊ ವೈರಲ್‌ ಆಗುತ್ತಿದ್ದು, ಅದರಲ್ಲಿ ಅಮ್ಜಾದ್ ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ ಎಂದು ಆಕೆ ಆರೋಪಿದ್ದಾಳೆ. ಅವರಿಬ್ಬರು ಒಟ್ಟಿಗೆ ಇರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಆಡಿಯೋ ಪ್ರಕಾರ,  ಅರ್ನವ್ 10 ವರ್ಷಗಳ ಹಿಂದೆ ಟ್ರಾನ್ಸ್ಜೆಂಡರ್ ಅನ್ನು  ದೇವಸ್ಥಾನದಲ್ಲಿ ವಿವಾಹವಾದರು. ಅವರು ಎರಡು ವರ್ಷ ಒಟ್ಟಿಗೆ ಇದ್ದರು. ಟಿ.ನಗರದಲ್ಲಿ ಅರ್ನವ್ ಅವರನ್ನು ಭೇಟಿಯಾಗಿದ್ದ ವೇಳೆ ತಮ್ಮ ನಡುವೆ ಪ್ರಣಯ ಸಂಬಂಧ ಬೆಳೆದಿತ್ತು ತೃತೀಯಲಿಂಗಿ ಹೇಳಿದ್ದಾರೆ. ಈ ವೇಳೆ ಅಮ್ಜಾದ್ ಹಲವಾರು ಮಹಿಳೆಯರೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದ ಹಾಗೂ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ಅರ್ನವ್ ತನ್ನ ವಿರುದ್ಧ ದಿವ್ಯಾ ಶ್ರೀ ಮಾಡಿರುವ ಆರೋಪಕ್ಕೆ ತಕ್ಕವನಾಗಿದ್ದಾನೆ ಎಂದು ಆಡಿಯೋದುದ್ದಕ್ಕೂ ಆಕೆ ಆರೋಪಿಸಿದ್ದಾರೆ. ದಿವ್ಯಾ ಅವರು ಅಮ್ಜಾದ್ ತನ್ನನ್ನು ಮದುವೆಯಾದ ನಂತರ ಗರ್ಬಿಣಿಯನ್ನಾಗಿಸಿ ಪ್ರಸ್ತುತ ತನ್ನದೇ ಮುಸ್ಲೀಂ ಸಮುದಾಯದ ಮತ್ತೊಬ್ಬ ಯುವತಿಯೊಂದಿಗೆ ಪ್ರೇಮ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಜೊತೆಗೆ ಅಮ್ಜಾದ್ ಮತಾಂತರಕ್ಕೆ ಯತ್ನಿಸಿದ್ದ ಎಂದು ದಿವ್ಯಾ ತನ್ನ ದೂರಿನಲ್ಲಿ ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!