ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಕಿರಗಂದೂರು ನಿರ್ಮಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಕನ್ನಡದಲ್ಲಿ ಬಹುಕೋಟಿ ಲಾಭದ ನಂತರ ಇದೀಗ ಇತರೆ ಭಾಷೆಗಳಲ್ಲಿಯೂ ಕಾಂತಾರ ಸೂಪರ್ ಹಿಟ್ ಆಗಿದೆ.
ಸಿನಿಮಾ ಕನ್ನಡಕ್ಕಾಗಿಯೇ ಮಾಡಿದ್ದರೂ, ಇದೀಗ ತಾನಾಗಿಯೇ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ.
ಪರಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದ ಬಳಿಕ ಚಿತ್ರದ ಅಬ್ಬರ ಜೋರಾಗಿದ್ದು, ಒಂದೇ ದಿನದಲ್ಲಿ 15 ಕೋಟಿ ಗಳಿಕೆ ಮಾಡಿದೆ. ರಿಷಭ್ ಶೆಟ್ಟಿ ಜನಪ್ರಿಯತೆ ಹೆಚ್ಚಾಗಿದ್ದು, ಎಲ್ಲಿಯೂ ರಿಷಭ್ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಕಲೆಕ್ಷನ್ ಸೇರಿಸಿ ಒಂದೇ ದಿನ 15 ಕೋಟಿ ರೂಪಾಯಿ ಸಂಗ್ರಹ ಆಗಿದೆ.