ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರಾಗಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರಾವಧಿ ಮುಕ್ತಾಯವಾಗಿದೆ. ಮಂಡಳಿಗೆ ಹೊಸ ಅಧ್ಯಕ್ಷರಾಗಿ ರೋಜರ್ ಬಿನ್ನಿ ನೇಮಕಗೊಂಡಿದ್ದಾರೆ.
ಇದೀಗ ತಮ್ಮ ಇನ್ನಿಂಗ್ಸ್ ಮುಗಿದ ನಂತರ ಸೌರವ್ ಗಂಗೂಲಿ ಹೊಸ ತಂಡಕ್ಕೆ ಶುಭ ಕೋರಿದ್ದಾರೆ.
‘ನಾನು ರೋಜರ್ ಬಿನ್ನಿ ಅವರನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಆಯ್ಕೆಯಾದ ಹೊಸ ಗುಂಪು ವಿಷಯಗಳನ್ನ ಮುಂದುವರಿಸಲು ಕೆಲಸ ಮಾಡುತ್ತದೆ. ಬಿಸಿಸಿಐ ಉತ್ತಮ ಕೈಯಲ್ಲಿದೆ. ಭಾರತೀಯ ಕ್ರಿಕೆಟ್ ಬಲವಾಗಿ ಪ್ರಗತಿಯಲ್ಲಿದ್ದು, ನಾವು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ’ ಎಂದರು.
ಸುಮಾರು 3 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವ್ರ ಬಿಸಿಸಿಐ ಜೊತೆಗಿನ ಪ್ರಯಾಣ ಇಲ್ಲಿಗೆ ಕೊನೆಗೊಂಡಿದೆ.