ಹೊಸ ದಿಗಂತ ವರದಿ, ಯಾದಗಿರಿ:
ಬಿಸಿಸಿಐ 15 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿಯ ಆಯ್ಕೆ ಪಂದ್ಯಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ ರಾಜ್ಯ ತಂಡದಲ್ಲಿ ಯಾದಗಿರಿಯ ನಗರದ ಗಾಂದಿ ನಗರ ಬಾಲಕಿ ಶ್ವೇತಾ ಹತ್ತಿಮನಿ ಸ್ಥಾನ ಪಡೆದಿದು ಯಾದಗಿರಿ ಜಿಲ್ಲೆಗೆ ಕಿರ್ತಿ ತಂದಿದ್ದಾಳೆ.
ನವನಂದಿ ವಿಂಗ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿರುವ ಶ್ವೇತಾ ಹತ್ತಿಮನಿ, ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಶ್ವೇತಾ ಹತ್ತಿಮನಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕೆಎಸ್‌ಸಿಎ ಗ್ರೂಪ್-ಎ ಅಲ್ಲಿನ ಟೀಮ್-ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

