October 16, 2026
Friday, October 16, 2026
spot_img

ಹೊಟ್ಟೆ ಉರಿ ಇವ್ರಿಗೆ: ಟ್ರೋಫಿ ಗೆದ್ರು ನನ್ನ ಮನೆಗೆ ತರೋದಿಲ್ಲ ಎಂದ ಮೊಹಮ್ಮದ್ ಅಮೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಟೂರ್ನಿಯ ಆರಂಭದಿಂದಲೇ ಭಾರತ ಈ ಬಾರಿ ಕಪ್ ಗೆಲ್ಲುವುದಿಲ್ಲ ಎಂದು ಅಮೀರ್ ಹೇಳುತ್ತಾ ಬಂದಿದ್ದರು. ಸೆಮಿಫೈನಲ್ ಹಂತಕ್ಕೂ ಭಾರತ ತಲುಪುವುದಿಲ್ಲ ಎಂಬ ಭವಿಷ್ಯವನ್ನೂ ಅವರು ನುಡಿದಿದ್ದರು. ಆದರೆ ಟೀಮ್ ಇಂಡಿಯಾ ಅವರ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಉಲ್ಟಾ ಮಾಡಿತು.

ಇದನ್ನೂ ಓದಿ:

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸುತ್ತದೆ ಎಂದು ಅಮಿರ್ ಹೇಳಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 7 ರನ್‌ಗಳ ಅಂತರದಿಂದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಬಳಿಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸುತ್ತದೆ ಎಂದು ಅಮೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿ ಕಪ್ ತನ್ನದಾಗಿಸಿಕೊಂಡಿತು. ಪಂದ್ಯದ ಬಳಿಕ ಖಾಸಗಿ ಚಾನೆಲ್ ಕಾರ್ಯಕ್ರಮದಲ್ಲಿ ಅಮೀರ್ ಭವಿಷ್ಯವಾಣಿ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಮಿರ್, “ಭಾರತ ಗೆದ್ದರೂ ಟ್ರೋಫಿಯನ್ನು ನನ್ನ ಮನೆಗೆ ತರುವುದಿಲ್ಲ, ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ,” ಎಂದು ಉತ್ತರಿಸಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Must Read