ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುವಾಹಟಿ ಟೆಸ್ಟ್‌ನಲ್ಲಿ ಭಾನುವಾರದ ಮೊದಲ ಸೆಷನ್ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದದಾಗಿದ್ದು, ಟೀಮ್ ಇಂಡಿಯಾದ ಬೌಲರ್ಸ್ ಒಂದೇ ಒಂದು ವಿಕೆಟ್ ಪಡೆಯಲು ವಿಫಲರಾದರು. ಈ ಸೆಷನ್‌ನಲ್ಲಿ ಸೆನುರನ್ ಮುತ್ತುಸಾಮಿ ಮತ್ತು ಕೈಲ್ ವೆರ್ರೆನ್ನೆ ಜೋಡಿ ತಂಡವನ್ನು ಉಳಿಸುವ ಮಹತ್ತರ ಜವಾಬ್ದಾರಿ ಹೊತ್ತು ಆಟವಾಡಿದರು. ರಕ್ಷಣಾತ್ಮಕ ಮತ್ತು ಸಮರ್ಥ ಆಟದ ಮೂಲಕ ಮುತ್ತುಸಾಮಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಸಿಡಿಸಿ ಭಾರತಕ್ಕೆ ಕಂಟಕವಾಗಿದ್ದಾರೆ.
ಭಾರತವು ಮೊದಲಿನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದ್ದರೂ, ದಕ್ಷಿಣ ಆಫ್ರಿಕಾವನ್ನು 300ಕ್ಕಿಂತ ಕಡಿಮೆಗೆ ಆಲೌಟ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಮುತ್ತುಸಾಮಿ ಆಟದಿಂದ ಬದಲಾಯಿತು. 10 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 109 ರನ್ ಗಳಿಸಿದ ಮುತ್ತುಸಾಮಿ, ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಔಟಾದರು. ಇದರೊಂದಿಗೆ ಅವರು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭೂಭಾಗದಲ್ಲಿ ಟೆಸ್ಟ್‌ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ಕನೇ ದಕ್ಷಿಣ ಆಫ್ರಿಕಾ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.

