ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜ್ಯ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಅಚ್ಚರಿಯ ಘಟನೆ ನಡೆದಿದ್ದು, ಇಲ್ಲಿನ ಪುರುಲಿಯಾದ ಗೋಬರಂದ ಗ್ರಾಮದಲ್ಲಿ 37 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿಯೊಬ್ಬ, ಈಗ ವೃದ್ಧನಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಮನೆ ಸೇರಿದ್ದಾರೆ.
ಪಶ್ಚಿಮ ಬಂಗಾಳದಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪುರುಲಿಯಾದಲ್ಲಿನ ಹಳ್ಳಿಯೊಂದರಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಇದು ಸುಮಾರು ನಾಲ್ಕು ದಶಕಗಳಿಂದ ದೂರವಾಗಿದ್ದ ಮಗನನ್ನು ತನ್ನ ಕುಟುಂಬದೊಂದಿಗೆ ಸೇರಿಸಿದೆ.
ವಿವೇಕ್ ಚಕ್ರವರ್ತಿ ಅವರು 1988ರಲ್ಲಿ ಕೇವಲ 37 ವರ್ಷದ ಯುವಕರಾಗಿದ್ದಾಗ ಮನೆ ಬಿಟ್ಟು ಹೋಗಿದ್ದರು. ಆ ನಂತರ ಸಂಪರ್ಕ ಕಡಿದು, ಎಲ್ಲಿದ್ದರು, ಏನು ಮಾಡುತ್ತಿದ್ದಾರೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಆದರೆ ದಶಕಗಳು ಕಳೆದವು. ಪೋಷಕರು, ತಮ್ಮಂದಿರು ಎಲ್ಲೆಡೆ ಹುಡುಕಿದರು. ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು, ಯಾವ ಸುಳಿವು ಸಿಗಲಿಲ್ಲ.ಆದರೆ ಇದೀಗ ಮತದಾರರ ವಿಶೇಷ ಪರಿಷ್ಕರಣೆಯು ಕುಟುಂಬಕ್ಕೆ ಕಳೆದು ಹೋದ ಮಗನನ್ನು ಹುಡುಕಿಕೊಟ್ಟಿದೆ.
ಆದ್ರೆ ಇದೀಗ 2025ರಲ್ಲಿ ನಡೆಯುತ್ತಿರುವ SIR ಕಾರ್ಯಕ್ರಮದಲ್ಲಿ ಗೋಬರಂದ ಗ್ರಾಮದ 245/72 ಬೂತ್‌ನ ಬೂತ್ ಲೆವೆಲ್ ಆಫೀಸರ್ (BLO) ಆಗಿ ಪ್ರಾಥಮಿಕ ಶಾಲಾ ಶಿಕ್ಷಕ ಪ್ರದೀಪ್ ಚಕ್ರವರ್ತಿ ಕೆಲಸ ಮಾಡುತ್ತಿದ್ದಾರೆ. ಪ್ರದೀಪ್ ಅವರೇ ವಿವೇಕ್ ಅವರ ಕಿರಿಯ ಸಹೋದರ.
ವಿಶೇಷ ಮತದಾರರತೀವ್ರ ಪರಿಷ್ಕರಣೆ ವೇಳೆ ಅವರು ತಮ್ಮ ಪ್ರದೇಶದಲ್ಲಿ ವಿತರಿಸಲಾದ ಪ್ರತಿಯೊಂದು ಗಣತಿ ನಮೂನೆಯ ಹೆಸರು ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸುತ್ತಿದ್ದಾಗ ತಮ್ಮ ಸಹೋದರನನ್ನು ಪತ್ತೆ ಹಚ್ಚಿದ್ದಾರೆ.
ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದ ವಿವೇಕ್ ಅವರ ಮಗ ದಾಖಲಾತಿಯನ್ನು ಕೋರಿ ಪ್ರದೀಪ್ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ವಿವೇಕ್ ಅವರು ತಮ್ಮ ಸಹೋದರ ಎಂಬುದನ್ನು ಪ್ರದೀಪ್ ಕಂಡುಕೊಂಡಿದ್ದಾರೆ. ಸತ್ಯ ತಿಳಿದ ತಕ್ಷಣ ಪ್ರದೀಪ್ ತಮ್ಮ ಅಣ್ಣ 1988ರಲ್ಲಿ ಮನೆ ಬಿಟ್ಟು ಹೋಗಿರುವುದನ್ನು ನೆನಪಿಸಿಕೊಂಡಿದ್ದಾರೆ.
ಸಹೋದರರಿಬ್ಬರು ಪರಸ್ಪರ ಮಾತನಾಡುವಾಗ ಅವರ ಧ್ವನಿಗಳು ನಡುಗಳು ಪ್ರಾರಂಭಿಸಿತ್ತು. 37 ವರ್ಷಗಳ ಮೌನದ ಬಳಿಕ ಅವರಿಬ್ಬರು ಮೊದಲ ಬಾರಿಗೆ ಮಾತನಾಡಿದಾಗ ಭಾವುಕರಾದರು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ವಿವೇಕ್, ಇದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. 37 ವರ್ಷಗಳ ಅನಂತರ ನಾನು ಅಂತಿಮವಾಗಿ ಮನೆಗೆ ಮರಳುತ್ತಿದ್ದೇನೆ. ಮನೆಯವರೆಲ್ಲರೊಂದಿಗೂ ಮಾತನಾಡಿದ್ದೇನೆ. ಸಂತೋಷ ವಿಶೇಷ ಮತದಾರರ ತೀವ್ರ ಪರಿಷ್ಕರಣೆ ಇಲ್ಲದೇ ಇರುತ್ತಿದ್ದರೆ ನಾನು ಮತ್ತೆ ಕುಟುಂಬದೊಂದಿಗೆ ಸೇರಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

