October 18, 2026
Sunday, October 18, 2026
spot_img

WIPL | ಆರ್‌ಸಿಬಿ ಫ್ಯಾನ್ಸ್‌ಗೆ ಮತ್ತೊಂದು ಟ್ರೋಫಿ ಬೇಕಿದೆ, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಬೆಂಗಳೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿ ಬೆಂಗಳೂರಿಗರು ಮತ್ತೊಮ್ಮೆ ಹುಮ್ಮಸ್ಸಿನಲ್ಲಿದ್ದಾರೆ. ನಾಲ್ಕನೇ ಆವೃತ್ತಿಯ ವುಮೆನ್‌ ಪ್ರೀಮಿಯರ್‌ ಲೀಗ್‌ನ ಫೈನಲ್‌ ಪಂದ್ಯಕ್ಕೆ ತಯಾರಿ ನಡೆದಿದೆ.

ಮತ್ತೊಂದು ಟ್ರೋಫಿಯ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಹಾಗೂ ಮೂರು ಆವೃತ್ತಿಯಿಂದ ರನ್ನರ್‌ಅಪ್‌ ಆಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸೆಣೆಸಲಿವೆ.

ಲೀಗ್‌ ಹಂತ 8 ಪಂದ್ಯಗಳ ಪೈಕಿ 6 ರಲ್ಲಿ ಗೆದ್ದಿರುವ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದರೆ ಡೆಲ್ಲಿ ಲೀಗ್‌ನಲ್ಲಿ 4 ಪಂದ್ಯ ಗೆದ್ದು ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದೆ.

ಹಾಗೆ ನೋಡಿದರೆ ಆರ್‌ಸಿಬಿ ಈ ಟೂರ್ನಿಯಲ್ಲಿ ಸಂಘಟಿತ ಪ್ರದರ್ಶನ ನೀಡುತ್ತಿದೆ. ನಾಯಕಿ ಸ್ಮೃತಿ ಮಂಧನಾ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ ವಿಫಲರಾದರೂ ಇತರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ನ್ಯಾಡಿನ್ ಡೆ ಕ್ಲರ್ಕ್, ಸಯಾಲಿ ಸತ್ತಾರೆ, ಲಾರೆನ್ ಬೆಲ್ ಜೊತೆಗೆ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡಾ ನಿರ್ಣಾಯಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ.

ಈ ಬಾರಿ ಕೂಡ ಟ್ರೋಫಿ ಮನೆಗೆ ಬರಲಿ ಎಂದು ಬೆಂಗಳೂರಿಗರು ನಿರೀಕ್ಷಿಸಿದ್ದಾರೆ.

Must Read