ಸೋಯಾ ಚಂಕ್ಸ್ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪ್ರೋಟೀನ್ ಮೂಲ. ವಿಶೇಷವಾಗಿ ವೆಜಿಟೇರಿಯನ್ ತಿಂಡಿಯಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆ ಇರೋರಿಗೆ ಇದು ಒಳ್ಳೆಯ ಆಯ್ಕೆ. ಸೋಯಾ ಚಂಕ್ಸ್ ಪುಲಾವ್ ಅನ್ನೋದು ಸುಲಭ, ರುಚಿಕರ, ಪೌಷ್ಟಿಕ ಹಾಗೂ ತೂಕ ಇಳಿಸಿಕೊಳ್ಳೋವರಿಗೆ ಸಹ ಸೂಕ್ತವಾದ ಒಂದು ಸ್ಪೆಷಲ್ ರೈಸ್ ಡಿಶ್.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿ)
ಟೊಮಾಟೋ – 1 (ಕತ್ತರಿಸಿ)
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕ್ಯಾರೆಟ್ – ½ ಕಪ್
ಬೀನ್ಸ್ – ½ ಕಪ್
ಬಟಾಣಿ – ¼ ಕಪ್
ಬಿರಿಯಾನಿ ಎಲೆ – 1
ಲವಂಗ – 2
ಏಲಕ್ಕಿ – 2
ದಾಲ್ಚಿನ್ನಿ – 1 ತುಂಡು
ಅರಶಿನ ಪುಡಿ – ¼ ಟೀಸ್ಪೂನ್
ಮೆಣಸಿನಪುಡಿ – ½ ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 2 ಕಪ್
ತಯಾರಿಸುವ ವಿಧಾನ:
ಮೊದಲು ಸೋಯಾ ಚಂಕ್ಸ್‌ನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ. ನಂತರ ಅದು ಮೃದುವಾದ ಮೇಲೆ ನೀರು ಒತ್ತಿ ತೆಗೆದು ಬಿಡಿ.
ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿರಿಯಾನಿ ಎಲೆ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ. ನಂತರ ಈರುಳ್ಳಿ ಹಾಕಿ ಬಣ್ಣ ಬದಲಾಯುವವರೆಗೂ ಫ್ರೈ ಮಾಡಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮಾಟೋ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಕ್ಯಾರೆಟ್, ಬೀನ್ಸ್, ಬಟಾಣಿ ಸೇರಿಸಿ 2–3 ನಿಮಿಷ ಫ್ರೈ ಮಾಡಿ.
ಅರಶಿನ ಪುಡಿ, ಮೆಣಸಿನಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ. ನಂತರ ನೆನೆಸಿದ ಸೋಯಾ ಚಂಕ್ಸ್ ಮತ್ತು ತೊಳೆದು ಇಟ್ಟ ಅಕ್ಕಿ ಸೇರಿಸಿ. ಉಪ್ಪು, ನೀರು ಹಾಕಿ ಮಿಶ್ರಣ ಮಾಡಿ. ಮುಚ್ಚಿ ಕಡಿಮೆ ಉರಿಯಲ್ಲಿ 10–12 ನಿಮಿಷ ಬೇಯಿಸಿ.

