Monday, November 24, 2025

ಆತ್ಮಹತ್ಯೆಗೆ ಶರಣಾದ ಎಚ್‌ಡಿಕೆ ಅಪ್ಪಟ ಅಭಿಮಾನಿ: ಮೃತರ ನಿವಾಸಕ್ಕೆ ನಿಖಿಲ್‌ ಕುಮಾರಸ್ವಾಮಿ ಭೇಟಿ

ಹೊಸದೊಗಂತ ಡಿಜಿಟಲ್‌ ಡೆಸ್ಕ್‌:

ಕೌಟುಂಬಿಕ ವಿಚಾರವಾಗಿ ಖಿನ್ನತೆಗೆ ಒಳಗಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೇವೇಗೌಡನದೊಡ್ಡಿಯಲ್ಲಿ ನಡೆದಿದೆ.

ದೇವೇಗೌಡನದೊಡ್ಡಿ ಗ್ರಾಮದ ಮಹದೇವು (31) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೂರು ದಿನಗಳ ಹಿಂದೆ ಮರವೊಂದಕ್ಕೆ ನೇಣುಬಿಗಿದುಕೊಂಡು ಮಹದೇವು ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಮಹದೇವು ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮಹದೇವು ಕುಮಾರಸ್ವಾಮಿ ಮತ್ತೆ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ, ಹೆಚ್.ಡಿ. ಕುಮಾರಸ್ವಾಮಿ ಅಪ್ಪಟ ಅಭಿಮಾನಿಯಾಗಿದ್ದ ಮಹದೇವು ಕುಮಾರಸ್ವಾಮಿ ಸಿಎಂ ಅಧಿಕಾರ ಕಳೆದು ಕೊಂಡಾಗ ಅವ್ರು ಮತ್ತೆ ಸಿಎಂ ಆಗಬೇಕು, ಮತ್ತೆ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ಚಪ್ಪಲಿ ತೊಡದೆ ಓಡಾಡುತ್ತಿದ್ದರು. ಅಪ್ಪಟ ಅಭಿಮಾನಿಯ ನಿಧನಕ್ಕೆ ಹೆಚ್‌ಡಿಕೆ ಸೇರಿದಂತೆ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.

error: Content is protected !!