Monday, November 24, 2025

ದುಬೈನಲ್ಲಿ ತೇಜಸ್‌ ಯುದ್ಧ ವಿಮಾನ ಪತನ: ಕೊನೆಗೂ ಮೌನ ಮುರಿದ HAL!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈ ಏರ್‌ಶೋನದಲ್ಲಿ ತೇಜಸ್‌ ಯುದ್ಧ ವಿಮಾನ ಪತನಗೊಂಡಿದ್ದು, ಇದು ಪ್ರತ್ಯೇಕ ಘಟನೆ ಎಂದು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ತಿಳಿಸಿದೆ.

ದುಬೈ ವಾಯು ಪ್ರದರ್ಶನದಲ್ಲಿ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಇತ್ತೀಚೆಗೆ ನಡೆದ ಘಟನೆ ಅಸಾಧಾರಣ ಸಂದರ್ಭಗಳಿಂದ ಉಂಟಾದ ಪ್ರತ್ಯೇಕ ಘಟನೆಯಾಗಿದೆ ಎಂದು ನಾವು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಹೆಚ್‌ಎಎಲ್‌ (HAL) ಸ್ಪಷ್ಟನೆ ನೀಡಿದೆ.

ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ ಅಥವಾ ಅದರ ಭವಿಷ್ಯದ ವಿತರಣೆಗಳ ಮೇಲೆ ಈ ಘಟನೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ. ತನಿಖೆ ನಡೆಸುವ ಸಂಸ್ಥೆಗಳಿಗೆ ಕಂಪನಿಯು ತನ್ನ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುತ್ತೇವೆ. ವುದೇ ಮಹತ್ವದ ಬೆಳವಣಿಗೆಗಳ ಬಗ್ಗೆ ಕಂಪನಿಯು ಪಾಲುದಾರರಿಗೆ ತಿಳಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ.

ನವೆಂಬರ್ 21 ರಂದು ದುಬೈ ವಾಯು ಪ್ರದರ್ಶನದಲ್ಲಿ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಯುದ್ಧ ವಿಮಾನ ಪತನಗೊಂಡು ಅದರ ಪೈಲಟ್ ಸಾವನ್ನಪ್ಪಿದರು.

error: Content is protected !!