Sunday, January 11, 2026

ಅರುಣಾಚಲ ಭಾರತದ್ದಲ್ಲ, ಚೀನಾ ಭಾಗ…ಏರ್ ಪೋರ್ಟ್ ನಲ್ಲಿ ಭಾರತೀಯಳಿಗೆ ಪ್ರಯಾಣ ನಿರಾಕರಿಸಿದ ಡ್ರ್ಯಾಗನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪಾಸ್​ಪೋರ್ಟ್ ಹೊಂದಿದ್ದ ಅರುಣಾಚಲಪ್ರದೇಶ ಮೂಲದ ಮಹಿಳೆಯೊಬ್ಬರನ್ನು ಚೀನಾದ ಶಾಂಘೈ ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಈ ಅರುಣಾಚಲ ಪ್ರದೇಶಕ್ಕಾಗಿ ಚೀನಾ ಸದಾ ಭಾರತದ ವಿರುದ್ದ ಕತ್ತಿ ಮಸೆಯುತ್ತಿದೆ.ಇದೀಗ ಲಂಡನ್‌ನಿಂದ ಜಪಾನ್‌ಗೆ ಪ್ರಯಾಣ ಬೆಳೆಸಿದ ಭಾರತೀಯ ಮಹಿಳೆಗೆ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಮುಂದುವರಿಸಲು ಅವಕಾಶ ನೀಡಿಲ್ಲ. ಕಾರಣ ಅರುಣಾಚಲ ಭಾರತದ ಭಾಗ, ನಿಮ್ಮ ಪಾಸ್‌ಫೋಸ್ ಇನ್‌ವ್ಯಾಲಿಡ್ ಎಂದು ಕಿರುಕುಳ ನೀಡಿದ ಘಟನೆ ನಡದಿದೆ. ಶಾಂಘೈ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 18 ಗಂಟೆ ಕಳೆಯಬೇಕಾದ ಘಟನೆ ನಡೆದಿದೆ.

ಏನಿದು ಘಟನೆ?
ಅರುಣಾಚಲ ಪ್ರದೇಶ ಮೂಲದ ಪ್ರೇಮಾ ವಾಂಗ್ ಥೊಂಗ್‌ಡಾಕ್ ನವೆಂಬರ್ 21 ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣ ಬೆಳೆಸಿದ್ದರು. ಸುದೀರ್ಘ ವಿಮಾನ ಪ್ರಯಾಣಧಲ್ಲಿ ವಿಮಾನ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆ ಉಳಿದಿತ್ತು. ಜಪಾನ್ ಭೇಟಿಯ ವೀಸಾ ಎಲ್ಲವೂ ಸರಿಯಾಗಿದೆ. ಆದರೆ ಶಾಂಘೈ ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳು ಭಾರತೀಯ ಮಹಿಳೆಯನ್ನು ಹಿಡಿದಿಟ್ಟಿದ್ದಾರೆ. ಬರೋಬ್ಬರಿ 18 ಗಂಟೆ ಈಕೆ ಅಧಿಕಾರಿಗಳ ವಿಚಾರಣೆ, ಕಿರುಕುಳವನ್ನು ಸಹಿಸಿಕೊಳ್ಳಬೇಕಾಯಿತು. ಕೊನೆಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಮಧ್ಯಪ್ರವೇಶದಿಂದ ಪ್ರೇಮಾ ವಾಂಗ್ ಪ್ರಯಾಣ ಮುಂದುವರಿಸಿದ್ದರು.

ಶಾಂಘೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಲಂಡನ್ ಜಪಾನ್ ವಿಮಾನ 3 ಗಂಟೆ ಲೇಓವರ್ ಇಲ್ಲಿದೆ. ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ವಿಮಾನ ಪ್ರಯಾಣಿಕರ ಪಾಸ್‌ಪೋರ್ಸ್ ಪರಿಶೀಲಿಸಿದ್ದರೆ. ಈ ವೇಳೆ ಪ್ರೇಮಾ ವಾಂಗ್ ಪಾಸ್‌ಪೋರ್ಟ್ ವಶಕ್ಕೆ ಪಡೆದು ಕಿರಿಕ್ ಆರಂಭಿಸಿದ್ದಾರೆ. ಕಾರಣ ಪ್ರೇಮಾ ವಾಂಗ್ ಭಾರತದ ಪಾಸ್‌ಪೋರ್ಟ್‌ನಲ್ಲಿ ಹುಟ್ಟಿದ ಸ್ಥಳ ಅರುಣಾಚಲ ಪ್ರದೇಶ ಎಂದಿತ್ತು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಚೀನಾ ಇಮಿಗ್ರೇಶನ್ ಅಧಿಕಾರಿಗಳು ಅರುಣಾಚಲ ಪ್ರದೇಶ ಚೀನಾದ ಅವಿಭಾಜ್ಯ ಅಂಗ, ಇದು ಭಾರತದ ಭಾಗವಲ್ಲ. ಹೀಗಾಗಿ ಪಾಸ್‌ಪೋರ್ಟ್ ಅಮಾನ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಚೀನಾ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವಂತೆ ಅಧಿಕಾರಿಗಳು ವ್ಯಂಗ್ಯವಾಡಿದ್ದಾರೆ.

ಮೂರು ಗಂಟೆಯಲ್ಲಿ ತನ್ನ ಲಂಡನ್ ಜಪಾನ್ ವಿಮಾನ ಹೊರಡುತ್ತಿತ್ತು. ವಿಮಾನ ಹೊರಡುವ ಸಮಯವಾದರೂ ಪಾಸ್‌ಪೋರ್ಸ್ ಅಮಾನ್ಯವಲ್ಲ ಎಂದು ಕಾರಣ ನೀಡಿ ಪ್ರೇಮಾ ವಾಂಗ್‌ಗೆ ಪ್ರಯಾಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಕಾಡಿ ಬೇಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜಪಾನ್ ವೀಸಾ ಸೇರಿದಂತೆ ಎಲ್ಲಾ ದಾಖಲೆ ತೋರಿಸಿದರೂ ಅವಕಾಶ ಸಿಗಲೇ ಇಲ್ಲ. ಬರೋಬ್ಬರಿ 18 ಗಂಟೆ ವಿಮಾನ ನಿಲ್ದಾಣದಲ್ಲಿ ಇರಬೇಕಾಯಿತು. ಯಾವುದೇ ಮೂಲ ಸೌಕರ್ಯವನ್ನೂ ನೀಡಲಿಲ್ಲ ಎಂದು ಪ್ರೇಮಾ ವಾಂಗ್ ಆರೋಪಿಸಿದ್ದಾರೆ.

ಭಾರತೀಯ ರಾಯಭಾರ ಅಧಿಕಾರಿಗಳ ಮಧ್ಯಪ್ರವೇಶ
ಎಲ್ಲಾ ಪ್ರಯತ್ನಗಳು ವಿಫಲಗೊಂಡಾಗ ಲಂಡನ್‌ನಲ್ಲಿರುವ ಪ್ರೇಮಾ ವಾಂಗ್ ಗೆಳತಿ ಸಹಾಯದಿಂದ ಚೀನಾದ ಶಾಂಘೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ.ರಾಯಭಾರ ಅಧಿಕಾರಿಗಳ ಮಧಪ್ರವೇಶದಿಂದ ಪ್ರೇಮಾ ವಾಂಗ್‌ಗೆ ಚೀನಾ ಇಮಿಗ್ರೇಶನ್ ಅಧಿಕಾರಿಗಳು ಪ್ರಯಾಣಕ್ಕೆ ಅನುಮತಿ ನೀಡಿದ ಘಟನೆ ನಡೆದಿದೆ. ಈ ಕುರಿತು ಆಕ್ರೋಶ ಹೊರಹಾಕಿರುವ ಪ್ರೇಮಾ ವಾಂಗ್, ಅರುಣಾಚಲ ಪ್ರದೇಶ ಭಾರತದ ಭಾಗವಾಗಿದ್ದರೂ ಚೀನಾ ಈ ರೀತಿ ಕಿರಿಕ್ ಮಾಡುತ್ತಿದೆ. ಈ ಕುರಿತು ಭಾರತ ಗಂಭೀರವಾಗಿ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ..

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!