ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಥಿಯೋಪಿಯಾದಲ್ಲಿ ಸುಮಾರು 10 ಸಾವಿರ ವರ್ಷಗಳ ನಂತರ ಸಂಭವಿಸಿದ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ಕೇರಳದ ಕಣ್ಣೂರಿನಿಂದ ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 1433 ಅನ್ನು ತುರ್ತಾಗಿ ಗುಜರಾತ್‌ನ ಅಹಮದಾಬಾದ್ ಕಡೆಗೆ ಮಾರ್ಗ ಬದಲಾಯಿಸಲಾಯಿತು.
ಬರೋಬ್ಬರಿ 10,000 ವರ್ಷಗಳ ಬಳಿಕ ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ವಿಜ್ಞಾನಿಗಳು ಇದು ಅತೀ ವಿಶೇಷ ಹಾಗೂ ಅಪರೂಪ ಎಂದಿದ್ದಾರೆ. ಆಗಸದಲ್ಲಿ 15 ರಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ದಟ್ಟ ಹೊಗೆ, ಬೂದಿ ಆವರಿಸಿದೆ. ಇದರ ಪರಿಣಾಮ ಕೇರಳದ ಕಣ್ಣೂರಿನಿಂದ ಅಬುಧಾಬಿಗೆ ತೆರಳಬೇಕಿದ್ದ ವಿಮಾನ ಅಹಮ್ಮದಾಬಾದ್‌ನಿಂದ ಟೇಕ್ ಆಫ್ ಆಗಲಿದೆ.
ಇಥಿಯೋಪಿಯಾ ಜ್ವಾಲಾಮುಖಿಯಿಂದ ಭಾರತದ ಹಲವು ವಿಮಾನ ಮಾರ್ಗಗಳು ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಕೆಲ ವಿಮಾನ ಪ್ರಯಾಣ ರದ್ದಾಗುವ ಸಾಧ್ಯತೆ ಇದೆ.
ಸದ್ಯ ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ ತೀವ್ರತೆ ಕಡಿಮೆಯಾಗಿದೆ. ಭಾನುವಾರ ಸ್ಫೋಟಗೊಂಡ ಸೋಮವಾರವೂ ಮುಂದುವರಿದಿತ್ತು. ಜ್ವಾಲಮುಖಿ ದ್ರಾವ ಕೆಂಪು ಸಮುದ್ರಕ್ಕ ಹರಿದಿದೆ. ಹೀಗಾಗಿ ಕೆಂಪು ಸಮುದ್ರದ ತೀರದ ಒಮನ್, ಯೆಮೆನ್ ಸೇರಿದಂತೆ ಹಲವು ದೇಶಗಳಲ್ಲಿ ಇದರ ಬೂದಿ, ಹೊಗೆ ಆವರಿಸಿಕೊಂಡಿದೆ. ಈ ಬೂದಿ ದೆಹಲಿಗೂ ತಲುಪಲಿದೆ. ನಾಳೆ ವೇಳೆಗೆ ಜ್ವಾಲಾಮುಖಿ ಬೂದಿ, ದೂಳು ದೆಹಲಿಗೆ ತಲುಪಲಿದೆ. ಇದರಿಂದ ದೆಹಲಿ ವಿಮಾನ ಪ್ರಯಾಣದಲ್ಲೂ ಹಲವು ಬದಲಾವಣೆಯಾಗುವ ಸಾಧ್ಯತೆ ಇದೆ.
ಕಣ್ಣೂರಿನಿಂದ ಅಹಮ್ಮದಾಬಾದ್‌ಗೆ ವಿಮಾನ
ಕೇರಳದ ಕಣ್ಣೂರಿನಿಂದ ಅಬುಧಾಬಿಗೆ ತೆರಳಬೇಕಿದ್ದ ವಿಮಾನದ ಮಾರ್ಗ ಬದಲಾವಣೆ ಮಾಡಲಾಗಿದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ವಿಮಾನ ಗುಜರಾತ್‌ನ ಅಹಮ್ಮದಾಬಾದ್‌ನಿಂದ ತೆರಳಲಿದೆ. ಹೀಗಾಗಿ ಇಂಡಿಗೋ ವಿಮಾನ ಸಂಸ್ಥೆ ಇದೀಗ ಕಣ್ಣೂರಿನಿಂದ ಪ್ರಯಾಣಿಕರು ಅಹಮ್ಮದಾಬಾದ್‌ಗೆ ತೆರಳಲು ಬೇರೆ ವಿಮಾನ ವ್ಯವಸ್ಥೆ ಮಾಡಲಾಗಿದೆ.

