April 11, 2026
Saturday, April 11, 2026
spot_img

ಗಲ್ಫ್ ರಾಷ್ಟ್ರಗಳ ಮೇಲೆ ಮತ್ತೆ ದಾಳಿ: ಇರಾನ್ ಗೆ ಖಡಕ್ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ ವಿರುದ್ಧ ಅಮೆರಿಕ, ಇಸ್ರೇಲ್‌ ಘೋಷಿಸಿರುವ ಸಮರ ಎರಡನೇ ವಾರಕ್ಕೆ ಕಾಲಿರಿಸಿದ್ದು, ದಾಳಿ- ಪ್ರತಿದಾಳಿ ಮುಂದುವರಿದಿದೆ. ಇದರ ನಡುವೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮುಂದುವರೆಸಿದ್ರೆ ದೊಡ್ಡ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸೌದಿ ಅರೇಬಿಯಾ ಸೋಮವಾರ ಇರಾನ್ ಗೆ ವಾರ್ನಿಂಗ್ ನೀಡಿದೆ.

ಬೃಹತ್ ಶೈಬಾ ತೈಲ ಕೇಂದ್ರದ ಮೇಲೆ ಇರಾನ್ ಡ್ರೋನ್ ದಾಳಿ ನಡೆದ ನಂತರ ಸೌದಿ ಅರೇಬಿಯಾ , ಇರಾನ್ ತನ್ನ ದಾಳಿಯನ್ನು ನಿಲ್ಲಿಸಿದೆ ಎಂಬ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಹೇಳಿಕೆಯನ್ನು ತಳ್ಳಿಹಾಕಿದೆ.

ಇರಾನ್ ಅಧ್ಯಕ್ಷರ ಭಾಷಣದ ಮಾತು ಪ್ರಾಯೋಗಿಕವಾಗಿ ಜಾರಿಗೆ ತಂದಿಲ್ಲ ಎಂಬುದನ್ನು ರಾಜ್ಯವು ದೃಢಪಡಿಸುತ್ತದೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯಾವುದೇ ವಾಸ್ತವಿಕ ಆಧಾರಗಳಿಲ್ಲದ ನೆಪಗಳನ್ನು ಆಧರಿಸಿ ಇರಾನ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಇರಾನ್ ದಾಳಿಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !