Monday, November 24, 2025

ಕನ್ನಡದ ಚಾಲಕರಿಗೆ ಅನ್ಯಾಯ ಆಗ್ತಿದೆ: ಉಬರ್‌ ಸಂಸ್ಥೆ ವಿರುದ್ಧ ಚಾಲಕರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫ್ಲೀಟ್ ಚಾಲಕರು ಮತ್ತು ಸ್ವತಂತ್ರ ಚಾಲಕರ ನಡುವೆ ಕಂಪನಿಯು ವಿಭಿನ್ನವಾಗಿ ವರ್ತಿಸುವುದರಿಂದ ಕಡಿಮೆ ಗಳಿಕೆಯಾಗಿದೆ ಎಂದು ಆರೋಪಿಸಿ ಹಲವಾರು ಕ್ಯಾಬ್ ಚಾಲಕರು ಇಂದು ಉಬರ್‌ನ ಚಾಲಕ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಚಾಲಕರ ಈ ಆರೋಪವನ್ನು ಸಂಸ್ಥೆ ತಳ್ಳಿಹಾಕಿದೆ. ಭಾರತ್ ಟ್ರಾನ್ಸ್‌ಪೋರ್ಟೇಶನ್ ಗ್ರೂಪ್ ಬ್ಯಾನರ್ ಅಡಿಯಲ್ಲಿ ಚಾಲಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಕಂಪನಿಯು ರಾಜ್ಯದ ಹೊರಗಿನಿಂದ ಚಾಲಕರನ್ನು ನೇಮಿಸಿಕೊಳ್ಳುತ್ತಿದೆ ಇದು ಇಲ್ಲಿನ ಸ್ಥಳೀಯ ಚಾಲಕರ ಆದಾಯದ ಮೇಲೆ ಪರಿಣಾಮ ಬೀರಿದೆ ಎಂದು ಎಂದು ಆರೋಪಿಸಲಾಗಿದೆ.

ಕೆಲವು ಚಾಲಕರು ಬೀಗ ಹಾಕಿದ ಬಾಗಿಲನ್ನು ಮುರಿದು ಕಚೇರಿಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದರು. ಉಬರ್ ಘಟನೆಯನ್ನು ಬಲವಾಗಿ ಖಂಡಿಸಿದ್ದು ಫ್ಲೀಟ್ ಚಾಲಕರು ಮತ್ತು ಸ್ವತಂತ್ರ ಚಾಲಕರ ನಡುವೆ ವಿಭಿನ್ನವಾಗಿ ವರ್ತಿಸಲಾಗಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.

error: Content is protected !!