Wednesday, November 26, 2025

Skin Care |ಚಳಿಗಾಲದಲ್ಲಿ ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳೋದು ಯಾಕೆ? ಇದನ್ನು ಹೇಗೆ ತಡೆಗಟ್ಟಬಹುದು?

ಚಳಿಗಾಲ ಬಂದರೆ ಚಹಾ, ಬೆಚ್ಚಗಿನ ಬ್ಲ್ಯಾಂಕೆಟ್ ಮಂಜು ತುಂಬಿದ ಪರಿಸರ ನೋಡೋಕೆ ಎಲ್ಲರಿಗೂ ಇಷ್ಟ. ಆದರೆ ಚರ್ಮಕ್ಕೆ ಮಾತ್ರ ಈ ಚಳಿಗಾಲ ಕಷ್ಟ ಅಂತಾನೆ ಹೇಳ್ಬಹುದು! ತೇವಾಂಶ ಕಡಿಮೆಯಾಗುತ್ತಿದ್ದಂತೆ ಚರ್ಮ ಒಣಗಿ, ತುರಿಕೆ ಶುರುವಾಗುತ್ತೆ. ಈ ಚರ್ಮ ಸಮಸ್ಯೆಗೆ ಕಾರಣವೇನು? ಇದನ್ನು ಹೇಗೆ ನಿಯಂತ್ರಿಸಬಹುದು? ಅನ್ನೋದಕ್ಕೆ ಉತ್ತರ ಇಲ್ಲಿದೆ

  • ಚಳಿಗಾಲದ ಗಾಳಿಯಲ್ಲಿ ತೇವತೆ ಕಡಿಮೆ ಇರುವುದರಿಂದ ಚರ್ಮ ತನ್ನ ನೈಸರ್ಗಿಕ ತೇವಾಂಶ ಕಳೆದುಕೊಳ್ಳುತ್ತದೆ; ಇದರಿಂದ ತುರಿಕೆ ಹಾಗೂ ಒಣಗುವಿಕೆ ಹೆಚ್ಚುತ್ತದೆ.
  • ಚಳಿಗಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡ್ತೇವೆ. ಈ ಬಿಸಿ ನೀರು ಚರ್ಮದ ಎಣ್ಣೆ ಪದರವನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮ ಇನ್ನಷ್ಟು ಒಣಗುತ್ತದೆ.
  • ನಾವು ಬಳಸುವ ಸೋಪು ರಾಸಾಯನಿಕದಿಂದ ಕೂಡಿರುತ್ತೆ. ಇಂತಹ ಸೋಪ್‌ಗಳು ಚರ್ಮದ ತೇವಾಂಶವನ್ನು ಹೀರಿಕೊಂಡು ತುರಿಕೆಯನ್ನು ಹೆಚ್ಚಿಸುತ್ತವೆ.
  • ಚಳಿಗಾಲದಲ್ಲಿ ದಾಹ ಕಡಿಮೆಯಾಗಿ ನೀರು ಕಡಿಮೆ ಕುಡುಯುತ್ತೇವೆ; ಇದರಿಂದ ಚರ್ಮ ಒಣಗುತ್ತದೆ.

ಮಾಯಿಶ್ಚರೈಸರ್ ನ್ನು ಸ್ನಾನ ಮಾಡಿದ 5 ನಿಮಿಷಗಳಲ್ಲಿ ಹಚ್ಚಿದರೆ ಚರ್ಮದಲ್ಲಿ ತೇವತೆ ಹೆಚ್ಚಾಗುತ್ತದೆ ಮತ್ತು ತುರಿಕೆ ಕಡಿಮೆಯಾಗುತ್ತದೆ. ಜೊತೆಗೆ ಉತ್ತಮ ಆಹಾರ, ಸರಿಯಾಗಿ ನೀರು ಕುಡಿಯುವುದು ಮಾಡಿದರೆ ನಿಮ್ಮ ಸ್ಕಿನ್ ತುರಿಕೆ ಕಡಿಮೆಯಾಗುತ್ತದೆ.

error: Content is protected !!