ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಡಾಪೆಸ್ಟ್‌ನಲ್ಲಿ ಪುರಾತತ್ತ್ವಜ್ಞರು ಪುರತಾನ ವಸ್ತುಗಳನ್ನು ಉತ್ಖನನ ಮಾಡುವಾಗ ಸುಮಾರು 1,700 ವರ್ಷಗಳ ಹಳೆಯ ಶವದ ಪೆಟ್ಟಿಗೆಯೊಂದು ಪತ್ತೆಯಾಗಿದೆ.
ಈ ಪೆಟ್ಟಿಗೆಯನ್ನು ಓಪನ್ ಮಾಡಿದಾಗ ಅವರಿಗೆ ಅಚ್ಚರಿಯ ವಸ್ತುಗಳು ಸಿಕ್ಕಿವೆ. ಶತಮಾನಗಳಿಂದ ಈ ಶವಪಟ್ಟಿಗೆಯನ್ನು ಮುಟ್ಟಿಲ್ಲ. ಇದೀಗ ಪುರಾತತ್ತ್ವಜ್ಞರು ಇದನ್ನು ತೆರೆದು ನೋಡಿದ್ದಾರೆ. ಹಂಗೇರಿಯ ಒಬುಡಾದಲ್ಲಿ ಉತ್ಖನನ ಮಾಡುವ ವೇಳೆ ಬುಡಾಪೆಸ್ಟ್ನ ಪುರಾತತ್ತ್ವಜ್ಞರು ಹಳೆಯ ಶವದ ಪಟ್ಟಿಗೆಯನ್ನು ಪತ್ತೆ ಮಾಡಿದ್ದಾರೆ. ಈ ಶವಪೆಟ್ಟಿಯನ್ನು ರೂಮನ್ ಶೈಲಿಯಲ್ಲಿ ಸಂಪೂರ್ಣ ಕಲ್ಲಿನಿಂದ ಮಾಡಲ್ಪಟ್ಟಿದೆ.
ಈ ಶವಪೆಟ್ಟಿಗೆಯನ್ನು ತೆರೆದಾಗ ಪ್ರಾಚೀನ ರೋಮನ್ನಲ್ಲಿ ವಾಸವಾಗಿದ್ದ ಯುವತಿಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದೆ. ಈ ಪೆಟ್ಟಿಗೆಯ ಸುತ್ತ ಹಳೆಯ ಕಲಾಕೃತಿಯನ್ನು ಕೆತ್ತಲಾಗಿದೆ. ಇನ್ನು ಈ ಅಸ್ಥಿಪಂಜರ ಚಿಕ್ಕ ವಯಸ್ಸಿನ ಯುವತಿಯದ್ದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಪೆಟ್ಟಿಗೆಯ ಒಳಗೆ ಅಸ್ಥಿಪಂಜರ ಮಾತ್ರವಲ್ಲದೆ, ಗಾಜಿನ ಜಾಡಿಗಳು, ಕಂಚಿನ ಪ್ರತಿಮೆಗಳು, ಸುಮಾರು 140 ರೂಮ್ ನ್ಯಾಣಗಳು, ಹೇರ್ಪಿನ್ಗಳು, ಆಭರಣಗಳು ಹಾಗೂ ಚಿನ್ನದ ದಾರದಿಂದ ಮಾಡಿದ ಬಟ್ಟೆಯ ಅವಶೇಷಗಳು ಪತ್ತೆಯಾಗಿವೆ.
ಈ ವಸ್ತುಗಳನ್ನು ನೋಡಿದ ನಂತರ ಸಂಶೋಧಕರು ಶವದ ಪೆಟ್ಟಿಗೆ ಶ್ರೀಮಂತ ಮನೆತನದ್ದು ಎಂದು ಹೇಳಿದ್ದಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಿರುವ ಮನೆಯವರ ಶವದ ಪೆಟ್ಟಿಗೆ ಆಗಿರಬೇಕು ಎಂದು ಹೇಳಿದ್ದಾರೆ. 4ನೇ ಶತಮಾನದಲ್ಲಿ ಬಳಸಿದ ಶವದ ಪೆಟ್ಟಿಗೆಯನ್ನು ಮತ್ತೆ ಬಳಸುತ್ತಾರೆ. ಆದರೆ ಇಂಥಹ ಪೆಟ್ಟಿಗೆಗಳನ್ನು ವಿಶೇಷ ವ್ಯಕ್ತಿಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಈ ಯುವತಿಯ ವಯಸ್ಸು, ಸಾವಿಗೆ ಕಾರಣ, ಹೀಗೆ ಅನೇಕ ವಿಚಾರಗಳ ಬಗ್ಗೆ ತತ್ಞರು ಸಂಶೋಧನೆಯನ್ನು ನಡೆಸುತ್ತಿದ್ದಾರೆ.
1,700 ವರ್ಷಗಳ ಹಳೆಯ ಶವಪೆಟ್ಟಿಗೆ ಪತ್ತೆ, ಏನಿತ್ತು ಅದರಲ್ಲಿ?

