ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ನಿಂತುಹೋಗಿದೆ. ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನಗೆ ಹೃದಯಾಘಾತವಾದ ನಂತರ ಮದುವೆಯ ಕಾರ್ಯಗಳನ್ನು ಮುಂದೂಡಲಾಗಿದೆ.
ಆದರೆ ಪಲಾಶ್ ಮುಚ್ಚಲ್ ಮದುವೆಯ ಹಿಂದಿನ ದಿನ ಚೀಟಿಂಗ್ ಮಾಡಿದ ಕಾರಣ ಮದುವೆ ಪೋಸ್ಟ್‌ಪೋನ್ ಆಗಿದೆ ಎನ್ನುವ ಸುದ್ದಿಗಳು ಹರಿದಾಡಿದೆ. ಇನ್ನು ಪಲಾಶ್ ಇತರ ಹುಡುಗಿಯರ ಜೊತೆ ಫ್ಲರ್ಟಿಂಗ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಆದರೆ ಪಲಾಶ್ ಮುಚ್ಚಲ್ ತಾಯಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶ್ರೀನಿವಾಸ್ ಅವರನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವಾಗ ಪಲಾಶ್ ಮದುವೆ ಪೋಸ್ಟ್‌ಪೋನ್ ಮಾಡೋಣ ಎಂದು ಹೇಳಿದ್ದಾರೆ. ಪಲಾಶ್ ತನ್ನ ಮಾವನ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಮಾವನ ಸಮ್ಮುಖದಲ್ಲಿಯೇ ಮದುವೆಯಾಗೋದು ಎಂದು ಪಲಾಶ್ ಹೇಳಿದ್ದಾರೆ ಎಂದು ತಾಯಿ ಹೇಳಿದ್ದಾರೆ.
ಮಾವ ಡಿಸ್ಚಾರ್ಜ್ ಆಗುವವರೆಗೂ ಮದುವೆ ಬೇಡ ಎಂದಿದ್ರಾ ಪಲಾಶ್ ಮುಚ್ಚಲ್?

