ಹೊಸದಿಗಂತ ಡಿಜಿಟಲ್ ಡೆಸ್ಕ್
ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಭಾರತದ “ಅತಿದೊಡ್ಡ” ರಕ್ಷಣಾ ಪ್ರದರ್ಶನ – ಡಿಫೆನ್ಸ್ ಎಕ್ಸ್‌ಪೋ- 2022 ಗೆ ಇಂದಿನಿಂದ (ಬುಧವಾರ) ಗುಜರಾತ್‌ನ ಗಾಂಧಿನಗರದಲ್ಲಿ ಚಾಲನೆ ಸಿಗಲಿದೆ.
ಭಾರತದ ‘ಹೆಮ್ಮೆಯ ಹಾದಿ’ ಎಂಬ ಥೀಮ್ ನಡಿ ಈವೆಂಟ್‌ನ 12ನೇ ಆವೃತ್ತಿಯನ್ನು ಆಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನಾ ಸಮಾರಂಭ ನೆರವೇರಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ತಿಳಿಸಿದೆ. ದೇಶಿ ನಿರ್ಮಿತ ಎಚ್‌ಟಿಟಿ-40 ವಿಮಾನ ಈ ಪ್ರದರ್ಶನದ ದೊಡ್ಡ ಆಕರ್ಷಣೆಯಾಗಿದೆ. ಇದನ್ನು ಬೆಂಗಳೂರಿನ ಎಚ್‌ಎಎಲ್ (ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್) ನಿರ್ಮಾಣ ಮಾಡಿದೆ.
ಈ ಕುರಿತು ಮಾತನಾಡಿರುವ ಸಚಿವ ರಾಜನಾಥ್ ಸಿಂಗ್, ಡಿಫೆನ್ಸ್ ಎಕ್ಸ್ ಪೋ- 2022 ರಕ್ಷಣಾ ಕ್ಷೇತ್ರದಲ್ಲಿ ಬೆಳೆಯುತ್ತಿರುವ ನಮ್ಮ ಪರಾಕ್ರಮವನ್ನು ಪ್ರದರ್ಶಿಸುತ್ತದೆ, ಇದು ರಾಷ್ಟ್ರದ ʼಮೇಕ್ ಇನ್ ಇಂಡಿಯಾʼ ಸಂಕಲ್ಪವನ್ನು ಸಾಕಾರಗೊಳಿಸುವ ಮಹತ್ತರ ಕಾರ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಈ ದ್ವೈವಾರ್ಷಿಕ ಪ್ರದರ್ಶನವನ್ನು ಭಾರತೀಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ವಲಯಗಳನ್ನು ಬೆಂಬಲಿಸಲು, ಪ್ರದರ್ಶಿಸಲು ಮತ್ತು ಭಾರತೀಯ ಮತ್ತು ಜಾಗತಿಕ ಗ್ರಾಹಕರೊಂದಿಗೆ ಪಾಲುದಾರಿಕೆಯನ್ನು ರೂಪಿಸಲು ಎಕ್ಸ್ ಪೋ ಆಯೋಜಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಡಿಫೆನ್ಸ್ ಎಕ್ಸ್‌ಪೋ- 2022 ಭಾರತೀಯ ಕಂಪನಿಗಳಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತಿರುವ ಮೊದಲ ಆವೃತ್ತಿಯಾಗಿದೆ. ಭಾರತೀಯ ಕಂಪನಿಗಳು, ಅವುಗಳ ವಿದೇಶಿ ಮೂಲದ ಅಂಗಸಂಸ್ಥೆಗಳು, ಭಾರತದಲ್ಲಿ ನೋಂದಾಯಿಸಲಾದ ಕಂಪನಿಯ ವಿಭಾಗ ಮತ್ತು ಭಾರತೀಯ ಕಂಪನಿಯೊಂದಿಗೆ ಜಂಟಿ ಉದ್ಯಮವನ್ನು ಹೊಂದಿರುವ ಪ್ರದರ್ಶಕರನ್ನು ಭಾರತೀಯ ಭಾಗವಹಿಸುವವರು ಎಂದು ಪರಿಗಣಿಸಲಾಗುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ