ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನ ಖಾಸಗಿ ಶಾಲೆಯೊಂದರ ಪ್ರಿನ್ಸಿಪಾಲ್ ಕಾರು ಚಾಲಕ ನಾಲ್ಕು ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಎಲ್ಕೆಜಿ ಓದುತ್ತಿದ್ದ ಬಾಲಕಿ ಮೇಲೆ ಶಾಲೆಯ ಕೊಠಡಿಯಲ್ಲಿಯೇ ಅತ್ಯಚಾರ ಎಸಗಿದ್ದು, ಆರೋಪಿ ರಜಿನಿಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡ ಪೋಷಕರು ಆಕೆಯ ಬಳಿ ವಿಚಾರಿಸಿದಾಗ ವಿಷಯ ಹೊರಬಂದಿದೆ. ಮಗಳು ಮಾನಸಿಕವಾಗಿ ಕುಗ್ಗಿದ್ದಾಳೆ. ಯಾರು ಮಾತನಾಡಿಸಿದರೂ ಇದ್ದಕ್ಕಿದ್ದಂತೆಯೇ ಅಳುತ್ತಾಳೆ. ಆತನನ್ನು ಬೆತ್ತಲ ಮಾಡಿ ಸಾರ್ವಜನಿಕವಾಗಿ ಹೊಡೆಯಿರಿ. ಪ್ರಾಂಶುಪಾಲರನ್ನು ವಜಾ ಮಾಡಿ, ನಮ್ಮ ಫೀಸ್ ವಾಪಾಸ್ ನೀಡಿ ಎಂದು ಕೇಳಿದ್ದಾರೆ. ಶಾಲೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಅಲ್ಲಿಯ ಜನ, ವಾತಾವರಣ ಸರಿಯಿಲ್ಲ ಎಂದು ಹೇಳಿದ್ದಾರೆ.