Wednesday, November 26, 2025

ಟೀಂ ಇಂಡಿಯಾದಿಂದ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತೀ ಕೆಟ್ಟ ದಾಖಲೆ, ಸರಣಿ ದಕ್ಷಿಣ ಆಫ್ರಿಕಾ ಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಫಸ್ಟ್‌ ಟೈಮ್‌ ಭಾರತ ತಂಡ ಅತ್ಯಂತ ಕೆಟ್ಟ ದಾಖಲೆ ಬರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ತವರಿನಲ್ಲೇ ವೈಟ್‌ವಾಶ್‌ ಆಗಿದ್ದು, ಭಾರೀ ಮುಖಭಂಗ ಅನುಭವಿಸಿದೆ.

ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್‌ ನಾಯಕತ್ವದ ಟೀಂ ಇಂಡಿಯಾ 408 ರನ್‌ಗಳ ಅಂತರದ ಸೋಲು ಕಂಡಿದೆ. ಇದರೊಂದಿಗೆ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಕ್ಲೀನ್‌ ಸ್ವೀಪ್‌ನೊಂದಿಗೆ ಭಾರತದ ನೆಲದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

549 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ 4ನೇ ದಿನದ ಅಂತ್ಯಕ್ಕೆ 27 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಂಕಷ್ಟಕ್ಕೆ ಸಿಲುಕಿತ್ತು. ಇಂದು ಪಂದ್ಯವನ್ನ ಡ್ರಾಗೊಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ ಕೇವಲ 140 ರನ್‌ಗಳಿಗೆ ಆಲೌಟ್‌ ಆದ ಪರಿಣಾಮ ದಕ್ಷಿಣ ಆಫ್ರಿಕಾ 408 ರನ್‌ಗಳ ಬೃಹತ್‌ ಜಯ ಸಾಧಿಸಿತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಈ ಹಿಂದೆಯೇ ಹಲವು ಸೋಲುಗಳನ್ನ ಕಂಡಿದೆ. ಇದೇ ವರ್ಷ ನ್ಯೂಜಿಲೆಂಡ್‌ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲೂ 0-3 ಅಂತರದಲ್ಲಿ ಸೋಲು ಕಂಡಿದ್ದರೂ ರನ್‌ ಅಂತರ ಕಡಿಮೆಯಿತ್ತು. ಆದ್ರೆ ಇದೇ ಫಸ್ಟ್‌ ಟೈಮ್‌ 408 ರನ್‌ಗಳ ದೊಡ್ಡ ಅಂತರದಲ್ಲಿ ಸೋಲು ಕಂಡು ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡಿದೆ.

error: Content is protected !!