ಹೊಸದಿಗಂತ ವರದಿ ವಿಜಯಪುರ:
ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಡಿಜೆ ಸೌಂಡ್ ಹಾಕಿಕೊಂಡು ರ್ಯಾಲಿ ಮಾಡುತ್ತಿದ್ದ ಆಮ್ ಆದ್ಮಿ ಪಕ್ಷದ ವಾಹನವನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ನಗರದ ಗಾಂಧಿಚೌಕ್ನಲ್ಲಿ ನಡೆದಿದೆ.
ನಗರದಲ್ಲಿ ಆಮ್ ಆದ್ಮಿ ಪಕ್ಷದಿಂದ ಡಿಜೆ ಸೌಂಡ್ ಹಚ್ಚಿಕೊಂಡು ರ್ಯಾಲಿ ಮಾಡುವಾಗ, ಪೊಲೀಸ್ ಪರವಾನಿಗೆ ಪಡೆಯದೆ ಮೆರವಣಿಗೆ ನಡೆಸುತ್ತಿರುವುದು ತಿಳಿದು ಬಂದ ಹಿನ್ನೆಲೆ, ಸಿಪಿಐ ಸಿದ್ಧೇಶ ನೇತೃತ್ವದಲ್ಲಿ ಪೊಲೀಸರು ವಾಹನ ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.