ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ ಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಟಾಂಗ್ ನೀಡಿದ್ದು, ಯಾರು ಏನು ಚರ್ಚೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ, ಭೂತಾರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದಿದ್ದಾರೆ.
ನಾವೆಲ್ಲಾ ಹಿಂದೂಗಳು, ದೈವಗಳು ನಮ್ಮ ಕಷ್ಟವನ್ನು ಬಗೆಹರಿಸುತ್ತದೆ ಎಂದು ನಂಬಿಕೊಂಡು ಬಂದಿದ್ದೇವೆ. ಭೂತರಾಧನೆ ಮಾಡುತ್ತಿರೋ ನಾವು ಹಿಂದೂಗಳಾಗಿ ಇರೋರು, ಹಿಂದೂಗಳಾಗಿ ಬದುಕುತ್ತಿರುವುದು, ನಾವು ಹಿಂದುಗಳಲ್ಲ ಅಂದರೆ ಅವರ ಹೇಳಿಕೆ ಶಾಸನ ಆಗುತ್ತಾ. ಯಾರು ಏನು ಚರ್ಚೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ, ಭೂತಾರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದು ಹೇಳಿದರು.
ಪರಿಶಿಷ್ಟರು, ಕೊರಗರು ಭೂತಾರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ನಾವು ಪಂಜುರ್ಲಿ ನಂಬ್ತೇವೆ. ನಂದಿ, ನಾಗದೇವರನ್ನು ಬೇರೆ ಬೇರೆ ದೈವಗಳನ್ನು ನಂಬುತ್ತಾರೆ. ಭೂತಾರಾಧನೆಯ ಭಾಗವಾಗಿ ಕೋಲ ಮಾಡ್ತೇವೆ. ನಮ್ಮ ಬದುಕಿನ ಒಂದು ಭಾಗವಾಗಿ ಭೂತಾರಾಧನೆ ಇದೆ ಎಂದು ಹೇಳಿದ್ದಾರೆ.