ಕಲ್ಯಾಣ ಕನಾ೯ಟಕದಲ್ಲಿ ಬದಲಾವಣೆಯ ಗಾಳಿ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಕಲಬುರಗಿ:

ಕಲ್ಯಾಣ ಕನಾ೯ಟಕದ ಭಾಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಬುಧವಾರ ಗ್ರಾಮೀಣ ಮತಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ,ಈ ಭಾಗದಿಂದ ಕಾಂಗ್ರೆಸ್ ಶಾಸಕರು ಹಿಂದೆ ಅನೇಕ ಬಾರಿ ಆಯ್ಕೆಗೊಂಡರು,ಭಾಗದ ಅಭಿವೃದ್ಧಿ ಮಾಡಲಿಲ್ಲ. ನಮ್ಮ ಸಕಾ೯ರ ಬಂದ ಮೇಲೆ ಈ ಭಾಗದ ಬಗ್ಗೆ ಮುತುವರ್ಜಿ ವಹಿಸಿ,3000 ಕೋಟಿ ನೀಡಿದೆ.ಮೊನ್ನೆ ತಾನೇ ಮುಂದಿನ ಬಜೆಟ್ನಲ್ಲಿ 5000 ಕೋಟಿ ನೀಡುವುದಾಗಿ ಘೋಷಿಸಿದೆ ಎಂದರು.

ಕಾಂಗ್ರೆಸ್ ಪಕ್ಷ ಎಲ್ಲ ವಿಧದಲ್ಲಿ ಸ್ಥಾನಮಾನ ಪಡೆದುಕೊಂಡರು,ಭಾಗದ ಅಭಿವೃದ್ಧಿ ಮಾಡುವಲ್ಲಿ ವಿಫಲ ಹೊಂದಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದರು. ಗ್ರಾಮೀಣ ಮತಕ್ಷೇತ್ರದ ಸವಾ೯ಂಗಿಣ ಅಭಿವೃದ್ಧಿಗಾಗಿ ಶ್ರಮಪಟ್ಟು ಬಸವರಾಜ ಮತ್ತಿಮಡು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. 500 ಕೋಟಿಯಷ್ಟು ಹಣವನ್ನು ಸುರಿದು,1060 ಮನೆಗಳು ಗ್ರಾಮೀಣ ಭಾಗದಲ್ಲಿ ನಮ್ಮ ಶಾಸಕರು ನೀಡಿದ್ದಾರೆ ಎಂದರು.

ಎಸ್ಸಿ,ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿ, 50 ವಷ೯ಗಳಿಂದ ಇರುವ ಬೇಡಿಕೆಯನ್ನು ನಮ್ಮ ಬಿಜೆಪಿ ಸಕಾ೯ರ ಇಡೇರಿಸಿದೆ. ಮುಂಬರುವ ಚುನಾವಣೆಯಲ್ಲಿ ಬಸವರಾಜ ಮತ್ತಿಮಡು ಅವರನ್ನು 25 ಸಾವಿರ ಮತಗಳ ಲಿಡ್ ನೀಡುವ ಮೂಲಕ ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕು ಎಂದರು.

ಮಳೆಯ ಮಧ್ಯೆ ಸಿಎಂ ಭಾಷಣ

ಜನಸಂಕಲ್ಪ ಯಾತ್ರೆ ನಿಮಿತ್ತ ವೇದಿಕೆಗೆ ಸಿಎಂ ಆಗಮಿಸಿದ್ದೆ ತಡ ಬಿರುಸಿನ ಮಳೆ ಪ್ರಾರಂಭವಾಯಿತು. ಭಾರಿ ಮಳೆಯಿಂದಾಗಿ ಉದ್ಗಾಟನೆ,ಹಾರ ತುರಾಯಿ,ಸ್ವಾಗತ ಭಾಷಣವನ್ನು ಎಲ್ಲವೂ ಮೊಟಕು ಗೊಳಿಸಿ,ನೇರವಾಗಿ ಸಿಎಂ ಭಾಷಣ ಪ್ರಾರಂಭ ಮಾಡಿದರು.ಭಾಷಣದ ನಂತರ ದೀಪ ಬೆಳಗಿಸಿ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.

ಇನ್ನೊಂದೆಡೆ ಭಾರಿ ಮಳೆಯಿಂದಾಗಿ ನೆರದಿದ್ದ ಜನ ಗುಂಪು ಗುಂಪಾಗಿ ಮಳೆಯಿಂದ ತಪ್ಪಿಸಿಕೊಳ್ಳಲು, ಒಂದೆಡೆಯಾದರೆ, ಹಲವರು ಸ್ಥಳದಲ್ಲೇ ಇದ್ದ ಖುಚಿ೯ಯನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು ಸಿಎಂ ಅವರ ಭಾಷಣ ಆಲಿಸಿದರು.ಕೊನೆಗೆ ಯಾರು ಆತೀರ ಪಡದೇ ಮಳೆ ನಿಂತ ಮೇಲೆ ನಿಧಾನವಾಗಿ ನಿಮ್ಮ ಮನೆಗಳಿಗೆ ತೆರಳಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!