ಹೊಸದಿಗಂತ ವರದಿ,ಕಲಬುರಗಿ:
ಧಾರಾಕಾರವಾಗಿ ಸುರಿದ ಮಳೆಯ ಮಧ್ಯದಲ್ಲಿ ಗುಡುಗು, ಸಿಡಿಲಿನಿಂದ 18 ಗೋವುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣನಾಯಕ್ ತಾಂಡಾದಲ್ಲಿ ಬುಧವಾರ ಸಂಜೆ ನಡೆದಿದೆ.
ಬುಧವಾರ ಮಧ್ಯಾಹ್ನ ಧಾರಾಕಾರವಾಗಿ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದು,ಸಿಡಿಲು ಬಡಿದು ಆಕಳುಗಳು ಸಾವನ್ನಪ್ಪಿವೆ.
9 ರೈತರಿಗೆ ಸೇರಿದ 17 ಲಕ್ಷ ರೂಪಾಯಿ ಮೌಲ್ಯದ ಆಕಳುಗಳಾಗಿದ್ದು ,ಸ್ಥಳಕ್ಕೆ ಪಶು ಆಸ್ಪತ್ರೆ ವೈದ್ಯರು ಮತ್ತು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.