ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸಿದ್ದಾರೆ. ಮಳೆಯಿಂದಾಗಿ ಮೆಜೆಸ್ಟಿಕ್ ಬಸ್ ಸ್ಟಾಂಡ್ ಬಳಿ ಗೋಡೆ ಕುಸಿದಿದ್ದು, ಘಟನೆಯಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಹಲವು ಕಾರುಗಳು ಜಖಂಗೊಂಡಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರ ಹಲವೆಡೆ ಜಲಾವೃತವಾಗಿದೆ. ಬೆಳ್ಳಂದೂರು,ಶಿವಾಜಿನಗರ ಮತ್ತು ಐಟಿ ಕಾರಿಡಾರ್ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
#BengaluruRain #Bengaluru
The impact of rainfall in the city is costing dearly to the citizens. Some of the vehicles washed away due to floods in Shivajinagar. @IndianExpress pic.twitter.com/s3u08pxuvg— Kiran Parashar (@KiranParashar21) October 19, 2022
ಶೇಷಾದ್ರಿಪುರಂನ ಜೆಡಿಎಸ್ ಕಚೇರಿ ಬಳಿ ಮೆಟ್ರೊ ಕಾಂಪೌಂಡ್ ಕುಸಿದು, ಐದಾರು ಕಾರುಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಅಲ್ಲಲ್ಲೆ ಮರಗಳು ಉರುಳಿ ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ.
#BengaluruRain #BengaluruMetro #Bengaluru
Due to night rainfall, Namma Metro retaining wall collapses near Seshadripuram on Wednesday night. Water logging reported in many roads of the city bringing traffic to halt in many areas. @IndianExpress pic.twitter.com/Y4e2i89JxD— Kiran Parashar (@KiranParashar21) October 19, 2022