ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿ ಮತ್ತೊಂದು ಭಾರೀ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರಿಗೆ ಸೈಬರ್ ಕ್ರಿಮಿನಲ್‌ಗಳು ಪೂಜೆ ಮಾಡುವ ನೆಪದಲ್ಲಿ 47 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ. ಸಮಸ್ಯೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂದು ಹೈದರಾಬಾದ್ ನ ಮಹಿಳೆಯೊಬ್ಬರು ಗೂಗಲ್ ನಲ್ಲಿ ಹುಡುಕಿದ್ದಾರೆ. ಇದನ್ನೇ ದಾಳವಾಗಿ ಮಾಡಿಕೊಂಡ ಕ್ರಿಮಿನಲ್‌ಗಳು ಹರಿಯಾಣದಿಂದ ಬಾಬಾ ಹೆಸರಿನಲ್ಲಿ ಕರೆ ಮಾಡಿದ್ದಾನೆ.
ಸಮಸ್ಯೆ ಪರಿಹಾರಕ್ಕೆ ಪೂಜೆ ಮಾಡುತ್ತಿದ್ದೇನೆ ಎಂದು ಮಹಿಳೆಗೆ ಫೋಟೋಗಳನ್ನು ಕಳುಹಿಸಿದ್ದಾನೆ. ಬಾಬಾ ಮಹಿಳೆಯಿಂದ ಕಂತುಗಳ ಪ್ರಕಾರ 47 ಲಕ್ಷ ರೂ. ದೋಚಿದ್ದಾನೆ. ಇಷ್ಟು ಹಣ ಸುರಿದರೂ ಸಮಸ್ಯೆ ಬಗೆಹರಿಯದ ಕಾರಣ ಮಹಿಳೆ ಬಾಬಾಗೆ ಕರೆ ಮಾಡಿದ್ದಾರೆ. ಅದೆಷ್ಟು ಬಾರಿ ಫೋನ್ ಮಾಡಿದರೂ ತೆಗೆಯದ ಕಾರಣ ಸಂತ್ರಸ್ತೆ ತಾನು ಮೋಸ ಹೋಗಿರುವುದನ್ನು ಅರಿತು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.