ಹೊಸದಿಗಂತ ಡಿಜಿಟಲ್ ಡೆಸ್ಕ್
ತಾನು ಆರ್ಡರ್ ಮಾಡಿದ ಚಿಕನ್ ಬಿರಿಯಾನಿ ನಿಗದಿತ ಸಮಯಕ್ಕೆ ಕೊಡಲಿಲ್ಲವೆಂದು ಊಟಕ್ಕೆ ಹೋಗಿದ್ದ ರೆಸ್ಟೋರೆಂಟ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದ್ದು, ಸದ್ಯ ಆಸಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕ್ವೀನ್ಸ್ ಪ್ರದೇಶದಲ್ಲಿ ಬಾಂಗ್ಲಾದೇಶದ ರೆಸ್ಟೋರೆಂಟ್ ಹೋಗಿದ್ದ 49 ವರ್ಷದ ಚೋಫೆಲ್ ನಾರ್ಬು ಎಂಬಾತ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಆದರೆ ಅವನ ಆರ್ಡರ್ ಅನ್ನು ನಿಗದಿತ ಸಮಯದಲ್ಲಿ ಪೂರೈಸುವಲ್ಲಿ ರೆಸ್ಟೋರೆಂಟ್ ವಿಫಲವಾಗಿದೆ. ಇದಿರಂದ ಸಿಟ್ಟಿಗೆದ್ದಿದ್ದ ನಾರ್ಬು ಮರುದಿನ ಮತ್ತೆ ಉಪಾಹಾರ ಗೃಹಕ್ಕೆ ಹೋಗಿ ಬೆಂಕಿ ಹಚ್ಚಿ ಬಂದಿದ್ದಾನೆ.
“ನಾನು ತುಂಬಾ ಕುಡಿದಿದ್ದೆ. ನಾನು ಚಿಕನ್ ಬಿರಿಯಾನಿ ಖರೀದಿಸಿದೆ. ಅವರು ನನಗೆ ಚಿಕನ್ ಬಿರಿಯಾನಿ ನೀಡಲಿಲ್ಲ. ಅದರಿಂದ ಸಿಟ್ಟಿನಲ್ಲಿ ನನಗೆ ಹುಚ್ಚು ಹಿಡಿದಂತಾಗಿತ್ತು ಅದಕ್ಕೆ ಬೆಂಕಿಹಚ್ಚಿಬಂದೆ” ಎಂದು ನೊರ್ಬು ತನ್ನ ಬಂಧನದ ನಂತರ ಪೊಲೀಸರಿಗೆ ತಿಳಿಸಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನ್ಯೂಯಾರ್ಕ್‌ನ ಅಗ್ನಿಶಾಮಕ ಇಲಾಖೆ ಇದರ ವಿಡಿಯೋವನ್ನು ಬಿಡುಗಡೆ ಮಾಡಿದೆ. ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚುವ ವೇಳೆ ಆ ವ್ಯಕ್ತಿಗೂ ಬೆಂಕಿ ತಗುಲಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ