ಕಾಂತಾರ ಭೂತಕೋಲ ಕಾಂಟ್ರೋವರ್ಸಿ- ಉಪೇಂದ್ರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂತಕೋಲ ನಮ್ಮ ಹಿಂದೂ ಧರ್ಮದ ಆಚರಣೆ ಎಂದು ರಿಷಭ್ ಶೆಟ್ಟಿ ಹೇಳಿದ್ದಕ್ಕೆ ನಟ ಚೇತನ್ ವಿರೋಧಿಸಿದ್ದಾರೆ. ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದು ಚೇತನ್ ಹೇಳಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಟ ಉಪೇಂದ್ರ ಏನು ಹೇಳ್ತಾರೆ ಕೇಳಿ..

ಧರ್ಮ ಸಂಸ್ಕೃತಿ ಸೂಕ್ಷ್ಮ ವಿಚಾರ, ಈ ವಿಚಾರಗಳು ಮಾತನಾಡಿದಷ್ಟು ಬೆಳೆಯುತ್ತವೆ. ಈ ವಿಷಯವನ್ನು ಇಲ್ಲಿಗೇ ಬಿಡಬೇಕು, ಪ್ರೋತ್ಸಾಹ ನೀಡಬಾರದು. ನಿರ್ಲಕ್ಷ್ಯ ಮಾಡಿಬಿಡಿ. ಬೆಂಕಿಗೆ ತುಪ್ಪ ಸುರಿಯುವುದು ಬೇಡ. ದೇವರು, ದೈವ ಎಲ್ಲ ವೈಯಕ್ತಿಕ ನಂಬಿಕೆಗೆ ಬಿಟ್ಟಿದ್ದು, ಸಾಮಾಜಿಕವಾಗಿ ಈ ಬಗ್ಗೆ ಕಿತ್ತಾಡುವುದು ಅಸಹ್ಯ.

ನಾನು ಕೂಡ ಆ ಊರಿನವನೇ, ಕಣ್ಣಾರೆ ಎಲ್ಲವನ್ನು ಕಂಡಿದ್ದೇನೆ. ಈಗಲೂ ನನ್ನ ತಂದೆ ಆಚರಣೆಯಲ್ಲಿ ತೊಡಗುತ್ತಾರೆ. ಬಹಳ ನಂಬಿಕೆ ಇರುವ ಜಾಗ ಅದು. ರಿಷಭ್ ಆರಾಧನೆಯ ಆಳ ತಿಳಿದು ಸಿನಿಮಾ ಮಾಡಿದ್ದಾರೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!