ಹೊಸದಿಗಂತ ಡಿಜಿಟಲ್ ಡೆಸ್ಕ್:
ತಪ್ಪು ತಿಳಿವಳಿಕೆಯಿಂದ ಏನೆಲ್ಲಾ ಆಗಬಹುದು, ಸಂಬಂಧವೇ ಒಡೆದುಹೋಗಬಹುದು, ಸ್ನೇಹಿತರು ದ್ವೇಷಿಗಳಾಗಬಹುದು. ಆದರೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಪ್ಪು ತಿಳಿವಳಿಕೆಗೆ ಕೊಲೆಯೇ ನಡೆದಿದೆ.
ಹೌದು ಮಹಾರಾಷ್ಟ್ರದ ಪಾಟ್ನಾದಲ್ಲಿ ಬಾಲಕನೊಬ್ಬ ತಾನು ಕಾಪಿ ಚೀಟಿ ಬೆಂಚಿನ ಕಡೆ ಬಿಸಾಡಿದ್ದಾನೆ. ಇದನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ ತನ್ನ ತಂದೆ, ಅಣ್ಣಂದಿರಿಗೆ ಹೇಳಿದ್ದು, ಅವರು ಬಾಲಕನನ್ನು ಕೊಂದು ದೇಹದ ಭಾಗಗಳನ್ನು ಎಲ್ಲಿ ಬೇಕಲ್ಲಿ ಎಸೆದಿದ್ದಾರೆ.
ಬಾಲಕನೊಬ್ಬ ಚೀಟಿ ಬಳಸಿ ಪರೀಕ್ಷೆ ಬರೆದಿದ್ದಾನೆ. ತರಗತಿಯಿಂದ ಹೊರಬಂದ ನಂತರ ಆಗ ತಾನೆ ಪರೀಕ್ಷೆಗೆ ಹೋಗಿದ್ದ ತನ್ನ ಕಸಿನ್‌ಗೆ ಚೀಟಿ ಪಾಸ್ ಮಾಡಲು ಹೊರಟಿದ್ದಾನೆ. ಕಸಿನ್‌ಗೆ ನೀಡಲು ಎಸೆದ ಚೀಟಿ ಇನ್ನೊಬ್ಬ ವಿದ್ಯಾರ್ಥಿನಿ ಬಳಿ ಬಿದ್ದಿದೆ. ಚೀಟಿ ನೋಡದೇ ವಿದ್ಯಾರ್ಥಿನಿ ಅದನ್ನು ಲವ್ ಲೆಟರ್ ಎಂದುಕೊಂಡಿದ್ದಾಳೆ.
ಪರೀಕ್ಷೆ ಮುಗಿಸಿ ತನ್ನನ್ನು ಪಿಕ್ ಮಾಡಲು ಬಂದಿದ್ದ ಅಪ್ಪನ ಬಳಿ, ತನಗೆ ಬಾಲಕನೊಬ್ಬ ಲವ್ ಲೆಟರ್ ನೀಡಿದ್ದ ಎಂದು ಹೇಳಿದ್ದಾಳೆ. ಅದು ನಿಜವಾಗಿಯೂ ಲವ್ ಲೆಟರ್ ಅಥವಾ ಬೇರೆಯಾ ಎಂದು ಗಮನಿಸದ ಪೋಷಕರು ಹಾಗೂ ಅಣ್ಣಂದಿರು ಬಾಲಕನನ್ನು ಹುಡುಕಿ ಥಳಿಸಿ ಕೊಂದಿದ್ದಾರೆ.
ಬಾಲಕನನ್ನು ಕಿಡ್ನಾಪ್ ಮಾಡಿ, ಕೊಂದು ರೈಲ್ವೆ ಹಳಿ ಬಳಿ ಬಿಸಾಡಿ ಹೋಗಿದ್ದಾರೆ. ನಾಲ್ಕು ದಿನದ ನಂತರ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಬಾಲಕಿಯ ತಂದೆ ಹಾಗೂ ಅಣ್ಣನನ್ನು ಬಂಧಿಸಿದ್ದಾರೆ. ಇಬ್ಬರ ದುಡುಕಿನ ನಿರ್ಧಾರಕ್ಕೆ ಜೀವ ಹೋಗಿದೆ, ಜೀವನವೂ ಹೋಗಿದೆ.