ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀ ಮಾಡುವುದರಲ್ಲಿ ಎಷ್ಟೇ ನಿಪುಣರಾದವರೂ ಕೂಡ ಒಂದು ಟೀ ಮಾಡಲು ಕನಿಷ್ಠ 10 ನಿಮಿಷ ತೆಗೆದುಕೊಳ್ಳುತ್ತಾರೆ. ಆದರೆ ಮಹಿಳೆಯೊಬ್ಬರು ಒಂದೇ ಗಂಟೆಯಲ್ಲಿ 10 ಅಲ್ಲ 20ಅಲ್ಲ ಬರೋಬ್ಬರಿ 249 ಚಹಾಗಳನ್ನು ತಯಾರಿಸಿದ್ದಾರೆ. ಈಕೆಯ ಪ್ರತಿಭೆಗೆ ಕಿರೀಟ ಕೊಡಬೇಕಲ್ಲವೇ? ಅದಕ್ಕಾಗಿಯೇ ಗಿನ್ನಿಸ್ ದಾಖಲೆಯ ಪ್ರಶಸ್ತಿ ಕೊಟ್ಟರು. “ಎಬಿಲಿಟಿ ಟು ಮೇಕ್ ಟೀಸ್ ಆಫ್ ನಥಿಂಗ್” ಎಂಬ ಪುಸ್ತಕವನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಇಂಗರ್ ವ್ಯಾಲೆಂಟೈನ್ ಒಂದು ಗಂಟೆಯಲ್ಲಿ 249 ಚಹಾಗಳನ್ನು ಮಾಡಿ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ. ಇಂಗರ್ ಮೂರು ರುಚಿಗಳಲ್ಲಿ ರೂಯಿಬೋಸ್ ಚಹಾವನ್ನು ತಯಾರಿಸುತ್ತಾರೆ. ಇದು ಗಿಡಮೂಲಿಕೆಯ ಚಹಾ. ಈ ಚಹಾದಲ್ಲಿ, ವೆನಿಲ್ಲಾ ಫ್ಲೇವರ್ ಮತ್ತು ಸ್ಟ್ರಾಬೆರಿ ಫ್ಲೇವರ್ಗಳ ಟೀಯನ್ನು ತಯಾರಿಸಲಾಗಿದೆ. ಈ ದಾಖಲೆ ಬರೆಯಲು 150 ಚಹಾ ಮಾಡಿದ್ದರೂ ಸಾಕಾಗಿತ್ತು, ಆದರೆ ಪಕ್ಕಾ ಪ್ಲಾನ್ನೊಂದಿಗೆ ಬರೋಬ್ಬರಿ 249 ಚಹಾಗಳನ್ನು ತಯಾರಿಸಿ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಈ ಚಹಾವನ್ನು ಸಾಮಾನ್ಯವಾಗಿ ಮಾಡಲು ಟೀ ಬ್ಯಾಗ್ಗಳನ್ನು ಕಪ್ನಲ್ಲಿ ಕನಿಷ್ಠ 2 ನಿಮಿಷಗಳ ಕಾಲ ನೆನೆಸಿಡಬೇಕು. ಆಗ ಮಾತ್ರ ಚಹಾವು ಉತ್ತಮ ಬಣ್ಣ ಮತ್ತು ರುಚಿಯನ್ನು ಹೊಂದಿರುತ್ತದೆ. ಆದರೆ ಇಂಗರ್ ತನ್ನ ಕೈಯನ್ನು ಮಿಷನ್ಗಿಂತ ವೇಗವಾಗಿ ತಿರುಗಿಸಿ ಒಂದು ಗಂಟೆಯಲ್ಲಿ 249 ಚಹಾ ತಯಾರಿಸಿದ್ದಾರೆ.