ಸ್ಕೈವಾಕ್ ಛಾವಣಿ ಮೇಲೆ ಹತ್ತಿದ ಯುವಕ: ಕೆಳಗಿಳಿಯಲು ರಾದ್ಧಾಂತ ಮಾಡಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯುವಕನೋರ್ವ ಸ್ಕೈವಾಕ್ ಛಾವಣಿಯ ಮೇಲೆ ಹತ್ತಿ ರಾದ್ಧಾಂತ ಸೃಷ್ಟಿಸಿದ್ದಾನೆ. ಆತನನ್ನು ಹಿಡಿಯಲು ಹೋದ ಐವರು ಸುಸ್ತೋ ಸುಸ್ತಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಗವ್ದೇವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವಕನ ಹೆಸರು ಶಕೀಲ್ ಅಹಿಯಾ (24) ಎಂದು ಗುರುತಿಸಲಾಗಿದೆ. ಈತ ಮಾದಕ ವ್ಯಸನಿಯಾಗಿದ್ದು, ಅಮಲಿನಲ್ಲಿ ಸ್ಕೈವಾಕ್‌ನ ಛಾವಣಿಯ ಮೇಲೆ ಹತ್ತಿ ಗಲಾಟೆ ಮಾಡಿದ್ದಾಗಿ ಬೆಳಕಿಗೆ ಬಂದಿದೆ.

ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಆತನನ್ನು ತನಿಖೆ ನಡೆಸಲಾಗುತ್ತಿದೆ. ಸ್ಕೈವಾಕ್‌ನ ಛಾವಣಿಯ ಮೇಲೆ ಯುವಕನನ್ನು ಗುರುತಿಸಿದ ಅಧಿಕಾರಿಗಳು ಆತನನ್ನು ಕೆಳಗಿಳಿಸಲು ಐವರನ್ನು ಕಳಿಸಿದ್ದಾರೆ. ಈ ವೇಳೆ ಮಾಳಿಗೆಯ ಮೇಲೆ ಕುಳಿತು ಕೆಳಗಿಳಿಯುವುದಿಲ್ಲ ಎಂದು ಮುಂದಕ್ಕೆ ಹೆಜ್ಜೆ ಹಾಕದೆ ಸಿಬ್ಬಂದಿಗೆ ಕಿರಿಕಿರಿ ಉಂಟು ಮಾಡಿದ್ದಾನೆ. ಸತತ ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಯುವಕನನ್ನು ಕೆಳಗಿಳಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!