ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ರಾಜಕೀಯ ಗೊಂದಲಗಳು ತೀವ್ರಗೊಳ್ಳುತ್ತಿದ್ದಂತೆ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. 44 ದಿನಗಳ ಹಿಂದೆಯಷ್ಟೇ ಪಿಎಂ ಆಗಿದ್ದರು. ತಮ್ಮ ನಾಯಕತ್ವದ ಮೇಲೆ ಯಾರೂ ವಿಶ್ವಾಸ ತೋರುತ್ತಿಲ್ಲ, ಅಂದುಕೊಂಡ ಹಾಗೆ ಸರ್ಕಾರವನ್ನು ಮುನ್ನಡೆಸಲು ಆಗುತ್ತಿಲ್ಲ. ಈ ಕಾರಣಕ್ಕೆ ರಾಜೀನಾಮೆ ನೀಡಿತ್ತಿದ್ದೇನೆ ಎಂದು ಲಿಜ್ ಟ್ರಸ್ ಹೇಳಿದ್ದಾರೆ.
ಪ್ರಧಾನಿಗೆ ಇನ್ನೂ ಟೋರಿ ಸಂಸತ್ತಿನ ಸದಸ್ಯರ ಬೆಂಬಲವಿದೆಯೇ ಎಂದು ಮೌಲ್ಯಮಾಪನ ಮಾಡುವ ಜವಾಬ್ದಾರಿ ಹೊಂದಿರುವ ಕನ್ಸರ್ವೇಟಿವ್ ಅಧಿಕಾರಿಯೊಂದಿಗೆ ಟ್ರಸ್ ತರಾತುರಿಯಲ್ಲಿ ವ್ಯವಸ್ಥಿತ ಸಭೆ ನಡೆಸಿದ ನಂತರ ಗುರುವಾರದ ನಿರೀಕ್ಷಿತ ನಡೆ ಬಂದಿದೆ.
ಬಾಂಡ್ ಮಾರುಕಟ್ಟೆ ಕುಸಿತವನ್ನು ಪ್ರಚೋದಿಸುವ ಆರ್ಥಿಕ ನೀತಿ ಪ್ರಾರಂಭಿಸಿದ ನಂತರ, ಟ್ರಸ್ ಕೇವಲ ಆರು ವಾರಗಳ ನಂತರ ಬ್ರಿಟನ್ ಪಿಎಂ ಸ್ಥಾನ ತೊರೆಯುವಂತೆ ಒತ್ತಡ ಹೆಚ್ಚಾಗಿತ್ತು.
Liz Truss resigns as the Prime Minister of the United Kingdom: Reuters
(Pic Source: Reuters) pic.twitter.com/H69dKh7wai
— ANI (@ANI) October 20, 2022