ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಮಹಾಮಾರಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಎಚ್ಚರಿಕೆ ನೀಡಿದೆ.
ಕೋವಿಡ್ ಮರೆಯಾಗಿದೆ ಎಂಬ ನಿಶ್ಚಿಂತೆ ಬೇಡ, ವೈರಸ್ ನಮ್ಮ ಜೊತೆಯಲ್ಲಿಯೇ ಇದೆ. ಅಷ್ಟೇ ಅಲ್ಲ, ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವೂ ಇದೆ ಎಂದು ಅದು ಎಚ್ಚರಿಸಿದೆ.
ಕೋವಿಡ್ ಆರಂಭಿಕ ದಿನಗಳನ್ನು ಗಮನಿಸಿದರೆ ಸೋಂಕಿನ ಪ್ರಮಾಣ ಇಳಿಮುಖವಾಗಿದೆ ನಿಜ, ಆದರೆ ಸೋಂಕಿತರು ಇನ್ನೂ ಪತ್ತೆಯಾಗುತ್ತಲೇ ಇದ್ದಾರೆ. ಇತರ ಉಸಿರಾಟದ ವೈರಸ್‌ಗಳಿಗೆ ಹೋಲಿಸಿದರೆ ಕೋವಿಡ್ ಉಂಟುಮಾಡುತ್ತಿರುವ ಸಾವುಗಳ ಸಂಖ್ಯೆ ಇಂದಿಗೂ ಹೆಚ್ಚಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೆಲ್ತ್ ರೆಗ್ಯುಲೇಷನ್ಸ್ ಎಮರ್ಜೆನ್ಸಿ ಕಮಿಟಿ ಹೇಳಿದೆ.
ಚಳಿಗಾಲ ಆರಂಭವಾಗುತ್ತಿದ್ದು, ಈ ಅವಧಿಯಲ್ಲಿ ಉತ್ತರ ಗೋಳಾರ್ಧದಲ್ಲಿ ವೈರಸ್ ಏಕಾಏಕಿ ಹೆಡೆಯೆತ್ತಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.