ಅಲ್ ಝೈಮರ್ ಕಾಯಿಲೆ: ವೈದ್ಯಲೋಕದಿಂದ ಹೊರಬಿತ್ತು ಖುಷಿಯ ಸುದ್ದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲ್ ಝೈಮರ್ (ಮರೆಗುಳಿ) ಕಾಯಿಲೆ ಕುರಿತಂತೆ ಖುಷಿಕೊಡುವ ಸುದ್ದಿಯೊಂದು ಹೊರಬಿದ್ದಿದೆ.
ಈ ಕಾಯಿಲೆಯನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವ ಪೊಸಿಟ್ರಾನ್ ಎಮಿಷನ್ ಟೋಮೊಗ್ರಫಿ (ಪಿಇಟಿ) ಇಮೇಜಿಂಗ್ ವ್ಯವಸ್ಥೆಯೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದರ ಸಂಶೋಧನಾ ವರದಿಯು ’ನ್ಯೂಕ್ಲಿಯರ್ ಮೆಡಿಸಿನ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಈ ಪಿಇಟಿ, ಆಲ್‌ಝೈಮರ್‌ನ ಪ್ರಾರಂಭಿಕ ಲಕ್ಷಣಗಳನ್ನು ಕಂಡುಹಿಡಿಯಲಿದೆ. ಜೊತೆಗೆ  ಸಮಯೋಚಿತವಾಗಿ ರೋಗ ನಿರ್ಣಯಿಸಿ, ಸರಿಯಾದ ಚಿಕಿತ್ಸೆ ಪಡೆಯಲೂ ನೆರವಾಗಲಿದೆ.
18ಎಫ್-ಎಸ್‌ಎಂಬಿಟಿ -1 ಹೆಸರಿನ ರೇಡಿಯೊಟ್ರೇಸರ್ ಆಲ್‌ಝೈಮರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾದ ವ್ಯಕ್ತಿಗಳಲ್ಲಿನ ಅತಿಭಾವುಕತೆಯ ಮೋನೊಮೈನ್ ಆಕ್ಸಿಡೇಸ್-ಬಿ (ಎಂಎಒ-ಬಿ) ಕಿಣ್ವವನ್ನು ಪತ್ತೆಹಚ್ಚುತ್ತದೆ. ಇದು ಆಲ್‌ಝೈಮರ್ ರೋಗ ನಿರ್ಣಯ, ರೋಗದ ಹಂತ ಹಾಗೂ ರೋಗಕ್ಕೆ ಕಾರಣವಾದ ಅಂಶಗಳನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯ ಪ್ರಮುಖ ಲೇಖಕ, ಅಮೆರಿಕದ ಪೀಟ್ಸ್‌ಬರ್ಗ್ ವಿಶ್ವವಿದ್ಯಾಲಯದ ವಿಕ್ಟರ್ ವಿಲ್ಲೆಮ್ಯಾಗ್ನೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!