ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟಿಯಿಂದ ದೂರ ಇದ್ದ ರಮ್ಯಾ ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಎಂಟ್ರಿ ನೀಡಲು ನಿರ್ಧರಿಸಿದ್ದರು.
ರಾಜ್ ಬಿ. ಶೆಟ್ಟಿ ಜತೆ ಸಿನಿಮಾ ಮಾಡಲು ನಿರ್ಧರಿಸಿದ್ದು, ತಮ್ಮದೇ ಪ್ರೊಡಕ್ಷನ್ ಹೌಸ್‌ನಿಂದ ಸಿನಿಮಾ ಬರಲಿದೆ ಎಂದು ರಮ್ಯಾ ಹೇಳಿಕೊಂಡಿದ್ದರು. ಆದರೆ ಸಿನಿಮಾದಲ್ಲಿ ರಮ್ಯ ನಟಿಯ ಪಾತ್ರ ನಿರ್ವಹಿಸುತ್ತಿಲ್ಲ. ರಮ್ಯಾ ಬದಲಿಗೆ ಸಿರಿ ರವಿಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ರಮ್ಯಾ ಮತ್ತೆ ಹೀರೋಯಿನ್ ಆಗಿ ಮಿಂಚಲಿದ್ದಾರೆ ಎನ್ನುವ ಅಭಿಮಾನಿಗಳ ಆಸೆ ನಿರಾಸೆಯಾಗಿದೆ.
ದೀಪಾವಳಿ ನಂತರ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಊಟಿ ಮತ್ತು ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ.