ಪ್ರೀತಿಯಿಂದ ಎಲ್ಲವೂ ಸಾಧ್ಯ, ಅಪ್ಪನ ಬದುಕಿಸಲು ಅಮ್ಮ ಕಿಡ್ನಿ ನೀಡಿದಳು.. ಭಾವನಾತ್ಮಕ ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಂದೆ ತಾಯಿ ಮಕ್ಕಳಿಗೆ ನೀವು ಹೀಗೆ ಸದಾ ಪ್ರೀತಿಯಿಂದ ಇರಿ ಎಂದು ಹೇಳಿಕೊಳ್ಳುವ ಬದಲು ತಾವೇ ಪ್ರೀತಿಯಿಂದ ಇದ್ದು ತೋರಿಸಿ ಮಾದರಿಯಾಗಬಹುದು. ಇದು ಮಕ್ಕಳಲ್ಲಿ ಗಂಭೀರ ಪರಿಣಾಮ, ಪ್ರೀತಿ ಬಗ್ಗೆ ಅತೀವ ನಂಬಿಕೆ ಹುಟ್ಟಿಸುತ್ತದೆ.

ತಂದೆ-ತಾಯಿಯ ಅಪೂರ್ವ ಪ್ರೀತಿ ಬಗ್ಗೆ ಮಗನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಹೌದಲ್ವಾ? ನಮ್ಮ ಮನೆಯಲ್ಲಿಯೂ ಅಪ್ಪ ಅಮ್ಮ ಇಷ್ಟೇ ಪ್ರೀತಿ ಮಾಡುತ್ತಾರೆ ನಾವದನ್ನು ನೋಡುತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ.

ನನ್ನ ತಂದೆ ಸಾಕಷ್ಟು ಬಾರಿ ಡಯಾಲಿಸಿಸ್ ಮಾಡಿಸಿಕೊಂಡು ಸೋತಿದ್ದರು. ಜೀವನದಲ್ಲಿ ಏನೂ ಇಲ್ಲ ಎಂಬಂತೆ ಬೇಸರ ಹೊಂದಿದ್ದರು. ಆದರೆ ನನ್ನ ತಾಯಿ ತಮ್ಮ ಕಿಡ್ನಿಯನ್ನು ದಾನ ಮಾಡಿ, ಅಪ್ಪನಿಗೆ ಮರುಜೀವ ಕೊಟ್ಟಿದ್ದಾರೆ. ಇವರಿಬ್ಬರ ಪ್ರೀತಿ ಜೀವನಕ್ಕಾಗುವಷ್ಟು ಸ್ಫೂರ್ತಿ ನೀಡಿದೆ ಎಂದು ಲಿಯೋ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಗಳನ್ನು ಓದಿದ ನೆಟ್ಟಿಗರು, ಮನಸ್ಸಿಗೆ ಮುಟ್ಟಿದೆ ಅವರ ಪ್ರೀತಿ ಸದಾ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

ಡಯಾಲಿಸಿಸ್ ಇದ್ದಾಗೆಲ್ಲಾ ಅಮ್ಮ ಐದು ಗಂಟೆಗಳು ಕಾದು ಕೂರುತ್ತಿದ್ದರು. ವಾರದಲ್ಲಿ ಮೂರು ದಿನ ಡಯಾಲಿಸಿಸ್ ಇರುತ್ತಿತ್ತು. ಈಗಾಗಲೇ ಅಪ್ಪನಿಗೆ 98 ಬಾರಿ ಡಯಾಲಿಸಿಸ್ ಮಾಡಿಸಲಾಗಿದೆ. ಅಮ್ಮ ಎಲ್ಲವನ್ನೂ ಆಲೋಚಿಸಿ ತನ್ನ ಕಿಡ್ನಿ ನೀಡಿ ಅಪ್ಪನನ್ನು ಉಳಿಸಿಕೊಂಡಿದ್ದಾರೆ. ಇದೀಗ ಇಬ್ಬರೂ ಸುಖವಾಗಿದ್ದಾರೆ. ನನ್ನ ಕಣ್ಣಿಗೆ ಇದೊಂದು ಸುಂದರ ಪ್ರೇಮಕಥೆಯಂತೆ ಕಾಣುತ್ತಿದೆ ಎಂದಿದ್ದಾರೆ.

ಇನ್ನೇನು ಜೀವನದ ಕಥೆಯೇ ಮುಗಿಯಿತು ಎಂದುಕೊಳ್ಳುವಾಗ ನಮ್ಮ ಪ್ರೀತಿಪಾತ್ರರು ಗೊತ್ತಿಲ್ಲದಂತೆ ಸಹಾಯ ಮಾಡುತ್ತಾರೆ, ಜೀವನೋತ್ಸಾಹ ತುಂಬುತ್ತಾರೆ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!